ಮಡಿಕೇರಿ, ಜು.೨೮: ಅಬಕಾರಿ ಇಲಾಖೆ ವತಿಯಿಂದ ಎಂ.ಚೆAಬು ಗ್ರಾಮದಲ್ಲಿ ದಾಳಿ ಮಾಡಿದ ಅಬಕಾರಿ ಇಲಾಖೆಯವರು ಕಳ್ಳಭಟ್ಟಿ ಸಾರಾಯಿ ಹಾಗೂ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಟ್ಟಪಾಳಿ ಮನೆ ವಿಷ್ಣುನಾಯಕ ಎಂಬಾತನನ್ನು ಬಂಧಿಸಿ ನಾಲ್ಕು ಲೀಟರ್ ಸಾರಾಯಿ, ತಯಾರಿಸಲು ಬಳಸಿದ ಅಂಡೆ, ಪಾತ್ರೆ ವಶಪಡಿಸಿಕೊಂಡು ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ವಲಯ ಉಪನಿರೀಕ್ಷಕಿ ವಿ.ಸ್ವರ್ಣಶ್ರೀ, ಅಬಕಾರಿ ಉಪ ನಿರೀಕ್ಷಕ ಬಿ.ಎಸ್.ಬಾಲಕೃಷ್ಣ, ಸಿಬ್ಬಂದಿಗಳಾದ ಹೆಚ್.ಎ.ರಾಜು, ಡಿ.ಎಸ್. ಮೋಹನ್‌ಕುಮಾರ್, ವಾಹನ ಚಾಲಕ ಸಿ.ಆರ್.ಲೋಕೇಶ್ ಪಾಲ್ಗೊಂಡಿದ್ದರು.