ಮಡಿಕೇರಿ, ಜು. ೨೭: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಆ.೨ ರಂದು ವಾರ್ಷಿಕ ಕಕ್ಕಡ ಪದ್‌ನೆಟ್ಟ್ ಆಚರಣೆ ನಡೆಯಲಿದೆ. ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ ಅಂದು ಬೆಳಿಗ್ಗೆ ೧೦:೩೦ ಗಂಟೆಗೆ ಆಚರಣೆ ನಡೆಯಲಿದೆ. ಸಿ.ಎನ್.ಸಿ ವತಿಯಿಂದ ನಡೆಯುವ ೨೭ನೇ ವರ್ಷದ ಆಚರಣೆಯಲ್ಲಿ ಕೊಡವ ಜನಾಂಗಕ್ಕೆ ದೊರಕಬೇಕಾಗಿರುವ ಎಸ್.ಟಿ ಟ್ಯಾಗ್, ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವುದು ಸೇರಿದಂತೆ ಜನಾಂಗದ ಇತರ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅವರು ತಿಳಿಸಿದ್ದಾರೆ.