ಮಡಿಕೇರಿ, ಜು. ೨೭: ತಾಲೂಕಿನ ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲ ವತಿಯಿಂದ ತಾ. ೩೧ ರಂದು ಗ್ರಾಮದ ತಳೂರು ಚಂಗಪ್ಪ ಮತ್ತು ಕುಶಾಲಪ್ಪ ಗದ್ದೆಯಲ್ಲಿ ’ಕೆಸರುಗದ್ದೆ ಕ್ರೀಡಾಕೂಟ’ ಆಯೋಜಿಸಲಾಗಿದೆ ಎಂದು ಮಂಡಲದ ಅಧ್ಯಕ್ಷ ಕಾಕೇರಿ ಸೂರಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨ನೇ ವರ್ಷದ ಕ್ರೀಡಾಕೂಟದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ (ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ), ೬-೧೪, ೧೪-೨೧, ೨೧-೩೫, ೩೫-೪೫ರ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಲಿದೆ. ಆಸಕ್ತರು ತಾ. ೨೮ ರೊಳಗೆ ತಂಡಗಳ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
೩ ಓವರ್‌ನ ಕ್ರಿಕೆಟ್ ಪಂದ್ಯಾಟಕ್ಕೆ ೧೫೦೦ ಮೈದಾನ ಶುಲ್ಕ ನಿಗದಿಪಡಿಸಲಾಗಿದೆ. ಹಗ್ಗಜಗ್ಗಾಟ ಪಂದ್ಯದ ಮಹಿಳೆಯರ ತಂಡ ೮೦೦, ಪುರುಷರ ತಂಡ ೧೦೦೦ ನೀಡಿ ತಂಡದ ಹೆಸರು ನೊಂದಾಯಿಸಿಕೊಳ್ಳಬೇಕು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಿಂಪಲ್ ಸೋಮಣ್ಣ ೮೨೯೬೬೩೯೫೨೩, ಮೋಹನ್ ಕುಶಾಲಪ್ಪ ೮೧೯೭೦೮೨೮೧೯ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಂಡಲದ ಉಪಾಧ್ಯಕ್ಷ ಟಿ.ಎಸ್.ಜಗದೀಶ್, ಕಾರ್ಯದರ್ಶಿ ತಳೂರು ಲೋಹಿತ್, ತಾಲೂಕು ಸಂಚಾಲಕ ವಿಕಾಸ್ ಉಪಸ್ಥಿತರಿದ್ದರು.