ಮಡಿಕೇರಿ, ಜು. ೨೭: ನಗರದ ಮಹದೇವಪೇಟೆಯ ಎ.ವಿ. ಶಾಲೆ ಬಳಿಯ ಸ್ವಸ್ತಿಕ್ ಯುವ ವೇದಿಕೆಯ ೨೧ನೇ ವರ್ಷದ ಗಣೇಶೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶೋಭಾಯಾತ್ರೆಯ ಉಪ ಸಮಿತಿಗಳನ್ನು ಸ್ವಸ್ತಿಕ್ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕುಲದೀಪ್ ಪೂಣಚ್ಚ ಹಾಗೂ ಪ್ರಮುಖ ಪ್ರಸಾದ್ ಎಂ.ಎಸ್ ನೇತೃತ್ವದಲ್ಲಿ ರಚಿಸಲಾಯಿತು.
ಪೂಜಾ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ದಿನೇಶ್ ಎಚ್.ಎಲ್, ಉಪಾಧ್ಯಕ್ಷರುಗಳಾಗಿ ಜಗದೀಶ್ ಎಚ್.ಎಚ್., ಪ್ರತಿಕ್ ಪ್ರಧಾನ ಕಾರ್ಯದರ್ಶಿಯಾಗಿ ಲಿಖಿತ್ ಕುಮಾರ್ ಹಾಗೂ ನಿತಿನ್ ಎ.ಎಂ ಅವರನ್ನು ನೇಮಿಸಲಾಯಿತು.
ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಸೋನಾಲ್ ಪೂಜಾರಿ ಎಂ.ಎಸ್ ಹಾಗೂ ಪ್ರಧಾನ ಸಂಚಾಲಕರಾಗಿ ಜಯಣ್ಣ ಡಿ ಉಪಾಧ್ಯಕ್ಷರುಗಳಾಗಿ ಮಾಚೆಟ್ಟಿರ ಸಚಿನ್ ಮಂದಣ್ಣ, ಬಿ ಸಿ ಭರತ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಹರಿ ಅಯ್ಯಂಗಾರ್, ಸಹ ಕಾರ್ಯದರ್ಶಿಗಳಾಗಿ ಚೋಕಿರ.ಕೆ. ಅಯ್ಯಪ್ಪ, ರೇಣುಕುಮಾರ್, ಮಂಜುನಾಥ್, ಶರಣ್ ಕುಮಾರ್, ಸಹ ಸಂಚಾಲಕರಾಗಿ ತೀತೀರ ಅಭಿಷೇಕ್ ಮುತ್ತಣ್ಣ, ಯತೀಶ್ ಅವರುಗಳನ್ನು ನೇಮಿಸಲಾಗಿದೆ.
ಆಹಾರ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ್ ಉಪಾಧ್ಯಕ್ಷರುಗಳಾಗಿ ಹರ್ಷಿತ್ ಹೆಚ್.ಬಿ. ಪ್ರಧಾನ ಕಾರ್ಯದರ್ಶಿಯಾಗಿ ಬಲ್ಲಂಡ ಸಚಿನ್ ಪೂಣಚ್ಚ ಕಾರ್ಯದರ್ಶಿಗಳಾಗಿ ಮನೋಹರ್ ಹಾಗೂ ಮನು ಅವರನ್ನು ನೇಮಿಸಲಾಗಿದೆ.
ಧ್ವನಿವರ್ಧಕ ಸಮಿತಿಯ ಅಧ್ಯಕ್ಷರಾಗಿ ಶಿವಪ್ರಕಾಶ್ ಹಾಗೂ ಪ್ರಧಾನ ಸಂಚಾಲಕರಾಗಿ ಗಣೇಶ್ ಎಚ್.ಪಿ., ಪ್ರಧಾನ ಕಾರ್ಯದರ್ಶಿ ಯಾಗಿ ಬೈರೇಟಿರ ಅಜಿತ್ ಪೂಣಚ್ಚ, ಕಾರ್ಯದರ್ಶಿಗಳಾಗಿ ಪಾಪಿನ್ ಪೂಣಚ್ಚ, ರಾಕೇಶ್, ನಿತೀಶ್ ಅವರನ್ನು ನೇಮಿಸಲಾಗಿದೆ.
ಆಗಸ್ಟ್ ೩೧ರಂದು ಅದ್ಧೂರಿಯ ಪೂಜಾ ಕಾರ್ಯಕ್ರಮ ಹಾಗೂ ಸಂಜೆಯ ನಂತರ ಅದ್ಧೂರಿ ಶೋಭಾಯಾತ್ರೆ ಕಾರ್ಯಕ್ರಮ ನಡೆಯಲಿದೆ.