ಮಡಿಕೇರಿ, ಜು. ೨೭: ರಾಜ್ಯದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ ೨೫೦ ರೂ ಗಳಂತೆ ಗರಿಷ್ಟ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್‌ಗೆ ಸಹಾಯಧನವನ್ನು ನೀಡಲು “ರೈತ ಶಕ್ತಿ” ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ರೈತ ಶಕ್ತಿ ಯೋಜನೆಗೆ ಒಳಪಡುವ ಅಂಶಗಳು: ಪ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಣಿಗೊAಡ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯು ಅರ್ಹತಾಧಾರಿತ ಯೋಜನೆ ಆಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ, ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ ಪ್ರೂಟ್ಸ್ ಪೋರ್ಟಲ್‌ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುವುದು. ಸಂಘ ಸಂಸ್ಥೆ/ ಸ್ವಸಹಾಯ ಗುಂಪುಗಳು/ ಟ್ರಸ್ಟ್ ಗಳು/ ಸಂಸ್ಥೆಗಳ ಹೆಸರಿನಲ್ಲಿರುವ ಭೂ ಒಡೆತನಗಳಿಗೆ ಸಹಾಯಧನ ಒದಗಿಸಲು ಅವಕಾಶವಿರುವುದಿಲ್ಲ. ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಾವಣಿಗೊAಡ ರೈತರು ಹೊಂದಿರುವ ಭೂಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ.೨೫೦ ರಂತೆ ಗರಿಷ್ಟ ಐದು ಎಕರೆಗೆ ಮಾತ್ರ ಮಿತಿಗೊಳಿಸಿ ರೂ.೧೨೫೦ ರವರೆಗೆ ಡೀಸೆಲ್ ಸಹಾಯಧನ ಮಿತಿಗೊಳಿಸಿದೆ.

ಒಂದು ಎಕರೆವರೆಗೆ(<=೧.೦೦ ಎಕರೆ) ರೂ.೨೫೦, ಎರಡು ಎಕರೆವರೆಗೆ(೧ ರಿಂದ ೨ ಎಕರೆ) ರೂ.೫೦೦, ಮೂರು ಎಕರೆವರೆಗೆ(೨ ರಿಂದ ೩ ಎಕರೆ) ರೂ.೭೫೦, ಮೂರು ಎಕರೆವರೆಗೆ(೩ ರಿಂದ ೪ ಎಕರೆ) ರೂ.೧೦೦೦ ಹಾಗೂ ನಾಲ್ಕು ಎಕರೆ ಮೇಲ್ಪಟ್ಟು(>೪.೦೦) ರೂ.೧೨೫೦. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಒಟ್ಟು ೬೭,೨೯೬ ರೈತರು ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿ ಆಗಿದ್ದು, ೨,೫೯,೭೯೬ ತಾಕುಗಳಲ್ಲಿ ಈಗಾಗಲೇ ೧,೫೫,೭೯೦ ಪ್ರೂಟ್ಸ್ ತಂತ್ರಾAಶಕ್ಕೆ ತಾಕುಗಳು ಸೇರ್ಪಡೆಯಾಗಿವೆ. ಇದುವರೆವಿಗೆ ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣೆಯಾಗದ ರೈತರು ನೋಂದಣೆ ಮಾಡಿಕೊಳ್ಳಲು ಹಾಗೂ ಈಗಾಗಲೇ ನೊಂದಣೆ ಮಾಡಿಕೊಂಡಿರುವ ರೈತರು ತಮ್ಮ ಎಲ್ಲಾ ಜಮೀನಿನ ವಿವರಗಳನ್ನು ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಾಯಿಸಿಕೊಳ್ಳುವAತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಶಬಾನಾ ಎಂ. ಷೇಕ್ ತಿಳಿಸಿದ್ದಾರೆ.