ಕರಿಕೆ, ಜು.೨೭: ಮಂಕಿ ಪಾಕ್ಸ್ ಎಂಬ ಸಾಂಕ್ರಾಮಿಕ ರೋಗ ನೆರೆಯ ಕೇರಳ ರಾಜ್ಯದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಪರಿಣಾಮವಾಗಿ ಗಡಿ ಗ್ರಾಮದ ಜನತೆ ಆತಂಕ ಗೊಂಡಿದ್ದಾರೆ. ಆದರೆ ಈ ಬಗ್ಗೆ ಗಡಿಯಲ್ಲಿ ಆರೋಗ್ಯ ಇಲಾಖೆ ಇನ್ನೂ ಕಟ್ಟೆಚ್ಚರ ವಹಿಸಿಲ್ಲ. ಗಡಿ ಭಾಗದಲ್ಲಿ ಪೊಲೀಸ್ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ತಪಾಸಣೆಗೆ ನಿಯೋಜನೆ ಮಾಡದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಗಡಿಯಲ್ಲಿ ಆರೋಗ್ಯ ಇಲಾಖೆ ತಪಾಸಣೆಗೆ ತಂಡವನ್ನು ನಿಯೋಜಿಸುವಂತೆ ಆಗ್ರಹಿಸಿದ್ದಾರೆ.
-ಸುಧೀರ್