ಕೋವರ್ ಕೊಲ್ಲಿ ಇಂದ್ರೇಶ್ನವದೆಹಲಿ, ಜು. ೨೭: ದೇಶದಲ್ಲಿ ೮೦ ವರ್ಷಗಳಿಂದ ಚಾಲ್ತಿಯಲ್ಲಿರುವ ಕಾಫಿ ಕಾಯ್ದೆಯನ್ನು ರದ್ದುಪಡಿಸಿ ನೂತನ ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ ೨೦೨೨ ನ್ನು ಜಾರಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ನೂತನ ಕಾನೂನಿನ ಮೂಲಕ ಕಾಫಿಯ ಉತ್ಪಾದನೆ ಮತ್ತು ಭಾರತೀಯ ಕಾಫಿಯ ಗುಣ ಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ಯನ್ನು ಹೊಂದಿರುವ ಕಾಫಿ ಮಂಡಳಿಯ ಕಾರ್ಯ ನಿರ್ವಹಣೆ ಯನ್ನು ಕೂಡ ಆಧುನೀಕರಿಸುವ ಗುರಿಯನ್ನು ಸರ್ಕಾರ ಹೊಂದಿದೆ, ನೂತನ ಕಾಯ್ದೆಯು ರಫ್ತು ಉತ್ತೇಜನದ ಜೊತೆಗೆ ದೇಶೀಯ ಮಾರುಕಟ್ಟೆಯಲ್ಲಿ ಕಾಫಿಯ ಅಭಿವೃದ್ಧಿ ಮಾಡಲಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂಬAಧಿಸಿದ ಅಧಿಕಾರಿಗಳ ಪ್ರಕಾರ ಅಸ್ತಿತ್ವದಲ್ಲಿರುವ ಕಾನೂನನ್ನು ೧೯೪೨ರಲ್ಲಿ ಜಾರಿಗೆ ತರಲಾಯಿತು, ಆ ಕಾಲಘಟ್ಟಕ್ಕೆ ಸಂಬAಧಿಸಿದ ನಿಬಂಧನೆ ಗಳೊಂದಿಗೆ ಪ್ರಸ್ತುತ ಅನೇಕ ನಿಯಮ ಗಳು ಮತ್ತು ನಿಬಂಧನೆಗಳು ವಿಶೇಷ ವಾಗಿ ಕಾಫಿಯ ಮಾರ್ಕೆಟಿಂಗ್‌ಗೆ ಸಂಬAಧಿಸಿದವುಗಳು ಈಗ ಅನಗತ್ಯವಾಗಿವೆ. ಇದಲ್ಲದೆ, ಕಳೆದ ೧೦ ವರ್ಷಗಳಲ್ಲಿ ಕಾಫಿ ಬೆಳೆಯುವ ಮಾರಾಟ ಮಾಡುವ ಮತ್ತು ಸೇವಿಸುವ ವಿಧಾನದಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿದೆ. ಆದ್ದರಿಂದ, ವಿವಿಧ ಹಂತಗಳಲ್ಲಿ ಕಾಫಿಯ ಸಂಸ್ಕರಣೆಯ ಸಂಪೂರ್ಣ ಮೌಲ್ಯ ಹೆಚ್ಚಳದ ಪ್ರಚಾರ ಮತ್ತು ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಸಮಗ್ರ ನಿಬಂಧನೆ ಗಳೊಂದಿಗೆ ಪರಿಷ್ಕೃತ ಮಸೂದೆಯು ಎಲ್ಲಾ ಬೆಳೆಗಾರರಿಗೆ, ಮಾರಾಟಗಾರರಿಗೆ ಮತ್ತು ಬಳಕೆ ದಾರರಿಗೂ ಅನುಕೂಲ ಕರವಾಗಲಿದೆ ಎಂದು ತಿಳಿಸಿದ್ದಾರೆ.
ಹೊಸ ಮಸೂದೆಯು ಕಾಫಿ ಮಂಡಳಿಯ ಹಲವಾರು ಕ್ರಿಯಾತ್ಮಕ ಕ್ಷೇತ್ರಗಳನ್ನು ತಿಳಿಸುತ್ತದೆ, ಉದಾಹರಣೆಗೆ ಉತ್ಪಾದನೆಗೆ ಬೆಂಬಲ, ಸಂಶೋಧನೆ, ವಿಸ್ತರಣೆ ಮತ್ತು ಗುಣಮಟ್ಟ ಸುಧಾರಣೆ, ಕಾಫಿಯ ಪ್ರಚಾರ ಮತ್ತು ಬೆಳೆಗಾರರ ಕೌಶಲ್ಯ ಅಭಿವೃದ್ಧಿಯಂತಹ ಅನೇಕ ಚಟುವಟಿಕೆಗಳನ್ನು ಹಳೆಯ ಕಾಫಿ ಮಂಡಳಿಯ ಜವಾಬ್ದಾರಿಕೆ ಮತ್ತು ಕರ್ತವ್ಯದಲ್ಲಿ ಸೇರಿಸಲಾಗಿಲ್ಲ ಆದರೆ ಈಗ ಇದೆಲ್ಲವುಗಳನ್ನೂ ಮಂಡಳಿಯ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು. ಕಾಫಿ ಉದ್ಯಮದ ಬೆಳವಣಿಗೆಯು ಉತ್ಪಾದನೆಯಿಂದ ಬಳಕೆಯವರೆಗೆ ಕಾಫಿ ಮೌಲ್ಯ ಸರಪಳಿಯ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಗಳು ಮತ್ತು ವ್ಯಾಪಾರ ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದಲ್ಲದೆ, ಗ್ರಾಹಕರು ಉತ್ತಮ ಅಂರ‍್ರಾಷ್ಟಿçÃಯ ಗುಣಮಟ್ಟದ ಕಾಫಿಯನ್ನು ಪಡೆಯಲಿದ್ದಾರೆ. ಈ ನೂತನ ಮಸೂದೆಯು ತೋಟಗಳು, ಸಂಸ್ಕರಣಾ ಘಟಕಗಳು ಮತ್ತು ಕಾಫಿ ಸಮುದಾಯಗಳಲ್ಲಿನ ಕಾರ್ಮಿಕರ ಹಿತಾಸಕ್ತಿಗಳನ್ನು ಕೂಡ ರಕ್ಷಿಸುತ್ತದೆ.
ಹಾಲಿ ಜಾರಿಯಲ್ಲಿರುವ ನೋಂದಣಿ ಮತ್ತು ಸದಸ್ಯತ್ವ ಪ್ರಮಾಣಪತ್ರದ (ಖegisಣಡಿಚಿಣioಟಿ ಛಿum ಒembeಡಿshiಠಿ ಅeಡಿಣiಜಿiಛಿಚಿಣe) ಐದು ವರ್ಷಗಳ ಸಿಂಧುತ್ವವನ್ನು ಒಂದು ಬಾರಿ ರಫ್ತುದಾರರ ನೋಂದಣಿಯೊAದಿಗೆ ಬದಲಾಯಿಸುವುದು
(ಮೊದಲ ಪುಟದಿಂದ) ಮತ್ತು ಕ್ಯೂರಿಂಗ್ ಘಟಕಗಳ ಒಂದು-ಬಾರಿ ನೋಂದಣಿಯನ್ನು ತರುವುದು ಸೇರಿದಂತೆ ದಾಖಲಾತಿಗಳು ಮತ್ತು ಕಾರ್ಯವಿಧಾನಗಳನ್ನು ಸರಳಗೊಳಿಸುವ ಮೂಲಕ ವ್ಯವಹಾರವನ್ನು ಸುಲಭಗೊಳಿಸಲು ಈ ಮಸೂದೆ ಉತ್ತೇಜಿಸುತ್ತದೆ.
ಇದರಿಂದಾಗಿ ಕ್ಯೂರಿಂಗ್ ಘಟಕಗಳು ಮತ್ತು ರಫ್ತುದಾರರು ಪ್ರತೀ ೫ ವರ್ಷಗಳಿಗೊಮ್ಮೆ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ, ಒಂದು ಬಾರಿ ನೋಂದಣಿ ಮಾಡಿದರೆ ಸಾಕು. ಕ್ಯೂರಿಂಗ್ ಎನ್ನುವುದು ಕಾಫಿ ಬೀಜಗಳನ್ನು ಮಾರುಕಟ್ಟೆಗೆ ಸಿದ್ಧಪಡಿಸುವ ಪ್ರಕ್ರಿಯೆಯಾಗಿದ್ದು ಈ ನೋಂದಣಿ ಪ್ರಮಾಣಪತ್ರವನ್ನು ನೀಡಲು ನೂತನ ಮಸೂದೆಯಲ್ಲಿ ಕಾಲಮಿತಿಯ ಕಾರ್ಯ ವಿಧಾನವಿರುತ್ತದೆ.
ಕಾಫಿ ಉತ್ಪಾದನೆಯ ಸುಧಾರಣೆಯ ಕಾರ್ಯತಂತ್ರಕ್ಕೆ ಸಂಬAಧಿಸಿದAತೆ, ದೇಶದಾದ್ಯಂತ ಸೂಕ್ತವಾದ ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಸಲು ಉತ್ಪಾದಕತೆಯ ಸುಧಾರಣೆಯು ವ್ಯವಸ್ಥಿತ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನದ ವರ್ಗಾವಣೆ ಮತ್ತು ಬೆಳೆಗಾರರ ಕೌಶಲ್ಯ ಅಭಿವೃದ್ದಿಗೂ ನೂತನ ಕಾಯ್ದೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ನಾಪೋಕ್ಲಿನ ಡಾ ಸಣ್ಣುವಂಡ ಕಾವೇರಪ್ಪ ಅವರು ತಾವು ಉಪಾಧ್ಯಕ್ಷರಾದ ಕಾಲದಿಂದಲೂ ಸುಮಾರು ೧೦ ವರ್ಷಗಳಿಂದಲೂ ೮೦ ವರ್ಷ ಹಳೆಯ ಕಾಫಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನ ನಡೆದಿದ್ದು ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಬದಲಾವಣೆ ಸಾಧ್ಯವಾಗಲಿಲ್ಲ ಎಂದರಲ್ಲದೆ ನೂತನ ಕಾಯ್ದೆಯು ಜಾರಿಗೆ ಬಂದಲ್ಲಿ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಬೆಳೆಗಾರರು, ಸಂಸ್ಕರಣೆ, ಮಾರಾಟಗಾರರು, ರಫ್ತುದಾರರು ಮತ್ತು ಬಳಕೆದಾರರು ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.