ಮಡಿಕೇರಿ, ಜು. ೨೭: ಎಐಸಿಸಿ ವತಿಯಿಂದ ಐವರು ಕಾರ್ಯದರ್ಶಿಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳ ಉಸ್ತುವಾರಿಯ ಹೊಣೆಗಾರಿಕೆಯನ್ನು ನೀಡಲಾಗಿದೆ. ಇದರಂತೆ ಕೇರಳ ಮೂಲದವರಾಗಿರುವ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಅವರನ್ನು ಕೊಡಗು ಜಿಲ್ಲೆಗೆ ನಿಯೋಜಿಸಲಾಗಿದೆ.

ಕೊಡಗು ಜಿಲ್ಲೆಯೊಂದಿಗೆ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೂ ಇವರು ಉಸ್ತುವಾರಿಯಾಗಿದ್ದಾರೆ.

ಕೆಪಿಸಿಸಿ ಮೂಲಕ ಈಗಾಗಲೇ ಉಸ್ತುವಾರಿಗಳಾಗಿ ವಿನಯಕುಮಾರ್ ಸೊರಕೆ ಹಾಗೂ ಲಕ್ಷö್ಮಣ್ ಅವರಿದ್ದು, ಇದೀಗ ರೋಜಿ ಜಾನ್ ಎಐಸಿಸಿಯಿಂದ ನಿಯೋಜಿಸಲ್ಪಟ್ಟಿದ್ದಾರೆ.