ವೀರಾಜಪೇಟೆ. ಜು, ೨೭: ಆರ್ಜಿ ಗ್ರಾಮದ ತೆರ್ಮೆಕಾಡುವಿನ ವಿವಾದಿತ ಸರ್ಕಾರಿ ಗೋಮಾಳ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ತಹಶೀಲ್ದಾರ್ ಯೋಗಾನಂದ ಅವರ ಉಪಸ್ಥಿತಿಯಲ್ಲಿ ಕಂದಾಯ ಪರಿವೀಕ್ಷಕ ಹರೀಶ್ ಹಾಗೂ ಇಲಾಖಾ ಸಿಬ್ಬಂದಿಯಿAದ ಪೊಲೀಸ್ ಬಿಗಿ ಬಂದೋಬಸ್ತಿನೊAದಿಗೆ ಆರಂಭಿಸಲಾಗಿದ್ದು, ತಾ. ೨೮ ರಂದು (ಇಂದು) ಕೂಡ ಮುಂದುವರಿಯಲಿದೆ.

೧೯೬೨ ರಲ್ಲಿ ಆಗಿನ ಜಿಲ್ಲಾಧಿಕಾರಿಗಳು ೮೯.೦೬ ಎಕರೆ ಜಾಗವನ್ನು ಗೋಮಾಳ ಜಾಗವಾಗಿ ಕಾಯ್ದಿರಿಸಿದ್ದರು. ೧೯೮೨ ರಿಂದ ಇತ್ತೀಚಿನವರೆಗೆ ಗೋಮಾಳದಲ್ಲಿ ಒತ್ತುವರಿಗಳು ನಡೆದು ಗೋಮಾಳವನ್ನು ಸಂರಕ್ಷಿಸುವ ಕಾರ್ಯಕ್ಕಾಗಿ ಆರ್ಜಿ ಗೋಮಾಳ ಸಂರಕ್ಷಣಾ ಸಮಿತಿಯು ನ್ಯಾಯಾಲಯದಲ್ಲಿ ದಾವೆ ಹೂಡಿ ಒತ್ತುವರಿ ತೆರವಿಗಾಗಿ ಮನವಿ ಸಲಿಸಿತ್ತು. ನ್ಯಾಯಾಲಯದ ಆದೇಶದಂತೆ ಇದೀಗ ತೆರವು ಕಾರ್ಯ ನಡೆಯುತ್ತಿದೆ.