ಮಡಿಕೇರಿ,ಜು.೨೬: ನಮ್ಮನ್ನು ಕಾಪಾಡುತ್ತಿರುವ ರಾಷ್ಟçದ ಸೈನಿಕರ ಮನಸನ್ನು ಅರಿತುಕೊಂಡು ಗೌರವಿಸುವ ನಾಯಕರುಗಳು ನಮಗೆ ಬೇಕಾಗಿದ್ದಾರೆ ಎಂದು ಮಂಗಳೂರು ವಿಭಾಗದ ಧರ್ಮ ಜಾಗರಣಾ ಸಹ ಸಂಯೋಜಕ ಪ್ರಕಾಶ್ ಮಲ್ಪೆ ಅಭಿಮತ ವ್ಯಕ್ತಪಡಿಸಿದರು.ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ವಾಹಿನಿ ವತಿಯಿಂದ ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಭಾರತ ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಸೈನಿಕರು ಸಂಬಳಕ್ಕಾಗಿ ಸೇನೆಗೆ ಸೇರುತ್ತಾರೆ ಎಂದು ಕೆಲವು ರಾಜಕಾರಣಿಗಳು ಹೇಳುತ್ತಾರೆ; ಅವರುಗಳಿಗೆ ಕಿಂಚಿತ್ತಾದರೂ ಕೃತಜ್ಞತೆ ಬೇಡವೇ ಎಂದು ಪ್ರಶ್ನಿಸಿದ ಅವರು, ದೇಶ ರಕ್ಷಣೆಯೊಂದೇ
(ಮೊದಲ ಪುಟದಿಂದ) ಸೈನಿಕರ ಗುರಿಯಾಗಿರುತ್ತದೆ. ಯುದ್ಧ ಸೋತರೂ ಯೋಧ ಎಂದಿಗೂ ಸೋಲುವುದಿಲ್ಲ. ಸೈನಿಕರ ಬದುಕು ಯುದ್ಧದಿಂದ ಬದಲಾಗುವದಿಲ್ಲ. ಸೈನಿಕರ ಮನಸ್ಸನ್ನು ಅರಿತುಕೊಳ್ಳುವ ನಾಯಕರು ನಮಗೆ ಬೇಕಾಗಿದ್ದಾರೆ. ಸಮಾಜ ಕೂಡ ಸೈನಿಕರಿಗೆ ಗೌರವ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಅದನ್ನು ನಾವುಗಳು ಕಾಣುತ್ತಿದ್ದೇವೆ ಎಂದು ಹೇಳಿದರು.
ಕೆಲವರು ನಗರದೊಳಗಿರುವ ನಕ್ಸಲರು ಎಂದು ಹೇಳಿಕೊಳ್ಳುವವರ ನಡುವೆ ನಾವುಗಳು ಕೂಡ ನಗರದೊಳಗಿನ ಸೈನಿಕರು ಎಂಬAತೆ ಸಮಾಜದಲ್ಲಿ ವ್ಯತ್ಯಾಸಗಳು ಕಂಡುಬAದರೆ ಹೆಗಲು ಕೊಟ್ಟು ನಿಲ್ಲಬೇಕು. ಈ ಕಾರ್ಯವನ್ನು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಲ್ಲಿನ ಕುರಿಗಾಹಿಗಳು ಮಾಡಿದ್ದರೆಂದು ಉದಾಹರಣೆ ಸಹಿತ ವಿವರಿಸಿದರಲ್ಲದೆ, ಕಾರ್ಗಿಲ್ ಯುದ್ಧ ಭಾರತೀಯರನ್ನು ಒಂದುಗೂಡಿಸುವ ಕಾರ್ಯ ಮಾಡಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ ಎಂದರು.
ಸ್ವಾತAತ್ರö್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಕೇವಲ ೩೯ ವರ್ಷ ಮಾತ್ರ ಹೋರಾಟ ಮಾಡಿದ್ದೇವೆ. ಆದರೆ, ಮೊಗಲರು, ಸುಲ್ತಾನರು ಸೇರಿದಂತೆ ಎರಡು ಸಾವಿರ ವರ್ಷಗಳ ಕಾಲ ಹೋರಾಟ ಮಾಡಿದ್ದೇವೆ. ನಮ್ಮ ಸಂಸ್ಕೃತಿ, ಜೀವನ ಪದ್ಧತಿಗಳ ಮೇಲೆ ಅವರುಗಳ ಪದ್ಧತಿ ಹೇರಲು ಪ್ರಯತ್ನಿಸಿದರೂ ಭಾರತೀಯ ಸಂಸ್ಕೃತಿ ಇನ್ನೂ ಕೂಡ ಜೀವಂತವಾಗಿ ಉಳಿದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಮಾತನಾಡಿ; ಪ್ರಸ್ತುತ ಸಮಾಜದಲ್ಲಿ ಸೈನಿಕರನ್ನು ಅವಹೇಳನ ಮಾಡಲಾಗುತ್ತಿದೆ, ಯುದ್ಧ ಮಾಡಿರುವದಕ್ಕೆ ಸಾಕ್ಷಿ ಕೇಳುತ್ತಾರೆ. ಯಾರೂ ಕೂಡ ಯುದ್ಧಭೂಮಿಯಲ್ಲಿ ವೀಡೀಯೋ ಮಾಡಿಕೊಂಡು ಕೂರುವದಿಲ್ಲ. ಯಾರೂ ಕೂಡ ಹೊಟ್ಟೆಪಾಡಿಗಾಗಿ ಸೇನೆಗೆ ಸೇರುವದಿಲ್ಲ, ದೇಶಭಕ್ತಿಯಿಂದ ದೇಶ ಸೇವೆಗಾಗಿ ಸೇರುತ್ತಾರೆ ಎಂದು ಹೇಳಿದರು. ಸ್ವಾತಂತ್ರö್ಯ ಸಂಗ್ರಾಮಲ್ಲಿ ಭಾಗವಹಿಸಿದ್ದ ವೀರರ ನೆನಪು ಯಾರಿಗೂ ಬೇಕಾಗಿಲ್ಲ. ಆಗಿನ ಕೇಂದ್ರ ಸರಕಾರದಲ್ಲಿದ್ದ ಶಿಕ್ಷಣ ಸಚಿವರುಗಳು ಚರಿತ್ರೆಯನ್ನು ತಿರುಚಿ ಹೋರಾಟಗಾರರಲ್ಲದವರ ವಿಚಾರಗಳನ್ನು ಪಠ್ಯದಲ್ಲಿ ತುರುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೇನೆಗೆ ಸೇರುವದರಿಂದ ದೇಶಭಕ್ತಿ ಮೂಡುತ್ತದೆ. ಇದೀಗ ಸೇನೆಯಲ್ಲಿಯೂ ಸಾಕಷ್ಟು ಆಧುನಿಕ ತಂತ್ರಜ್ಞಾನದ ವ್ಯವಸ್ಥೆಗಳಿವೆ. ನೂತನವಾಗಿ ಜಾರಿಗೆ ತಂದಿರುವ ಅಗ್ನಿಪಥ್, ಅಗ್ನಿವೀರ್ ಯೋಜನೆ ಯುವ ಪೀಳಿಗೆಗೆ ವರದಾನವಾಗಲಿದ್ದು, ಎಲ್ಲರೂ ಸೇನೆಗೆ ಸೇರಿಕೊಳ್ಳುವಂತೆ ಕರೆ ನೀಡಿದರು.
ಸ್ಮಾರಕಕ್ಕೆ ಪುಷ್ಪಾರ್ಚನೆ
ಕಾರ್ಯಕ್ರಮಕ್ಕೂ ಮೊದಲು ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ, ನಿವೃತ್ತ ಸೇನಾಧಿಕಾರಿ ಮೇ. ಓ.ಎಸ್.ಚಿಂಗಪ್ಪ, ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ವಿಭಾಗ ಸಂಯೋಜಕ್, ಮಹೇಶ್ ಕಡಗದಾಳು, ಹಿಂಜಾವೇ ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್, ನಗರ ಸಭಾ ಸದಸ್ಯರುಗಳು, ಹಿಂಜಾವೇ, ಹಿಂದು ಯವ ವಾಹಿನಿ ಪದಾಧಿಕಾರಿಗಳು, ವಿವಿಧ ಸಂಘÀ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಹಿAದು ಯುವ ವಾಹಿನಿಯ ವಿನಯ್ ಸ್ವಾಗತಿಸಿದರೆ, ಸುನಿಲ್ ಮಾದಾಪುರ ನಿರೂಪಿಸಿ, ತಾಲೂಕು ಸಂಯೋಜಕ ಮನು ರೈ ವಂದಿಸಿದರು.