ಕುಶಾಲನಗರ, ಜು. ೨೬: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಕುಶಾಲನಗರದಲ್ಲಿ ವಿಜಯೋತ್ಸವ ಕಾರ್ಯಕ್ರಮಗಳು ನಡೆದವು. ಕುಶಾಲನಗರ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ಮರಣೆ ಮಾಡುವುದರೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಎಂ.ಎನ್. ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೆ.ಎಂ. ಬೋಜಪ್ಪ, ಕಾರ್ಯದರ್ಶಿ ಎಸ್.ಆರ್. ಮಾದಪ್ಪ, ಖಜಾಂಚಿ ಎನ್.ಎಸ್ ನರೇಶಕುಮಾರ್ ಮತ್ತು ಸದಸ್ಯರು ಇದ್ದರು. ಕೊಡಗು ದೇಶಾಭಿಮಾನಿಗಳ ಬಳಗದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಕುಶಾಲನಗರದಲ್ಲಿ ಬೃಹತ್ ಬೈಕ್ ಜಾಥಾ ನಡೆಯಿತು.
ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿಯಿಂದ ಪ್ರಾರಂಭಗೊAಡ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ನಂತರ ಬೈಲುಕೊಪ್ಪೆ ಸಮೀಪದ ಹುಣಸೆವಾಡಿ ತನಕ ಸಾಗಿತು.
ಕೊಡಗು ದೇಶಾಭಿಮಾನಿಗಳ ಬಳಗದ ಲಕ್ಷಿö್ಮ ನಾರಾಯಣ ನೇತೃತ್ವದಲ್ಲಿ ನಡೆದ ರ‍್ಯಾಲಿಯಲ್ಲಿ ಮಾಜಿ ಸೈನಿಕರಾದ ಜನಾರ್ಧನ್, ಸುಧೀರ್, ಎ.ಪಿ. ವಾಸು, ಪ್ರಮುಖರಾದ ನವನೀತ್, ಉಮಾಶಂಕರ್, ಅಮೃತರಾಜ್, ಅನೀಲ್, ಮಂಜುಳ, ಚಂದ್ರು ಮತ್ತಿತ್ತರರು ಇದ್ದರು.