ಕೂಡಿಗೆ, ಜು. ೨೬: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ ಹಾರಂಗಿ ಅಣೆಕಟ್ಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬೆಳಿಗ್ಗೆ ೧೦ ಗಂಟೆಗೆ ದಿಢೀರ್ ಭೇಟಿ ನೀಡಿ ನೀರಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ಶಾಸಕರು ವಿದ್ಯುತ್ ಘಟಕ ಸಮೀಪ ಅಣೆಕಟ್ಟೆಯ ಎಡ ದ್ವಾರದ ಮೂಲಕ ಅಣೆಕಟ್ಟೆಯನ್ನು ಪ್ರವೇಶಿಸಿ ಅಣೆಕಟ್ಟೆಯಿಂದ ಮುಖ್ಯ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸುವ ಮತ್ತು ನೀರು ಸಂಗ್ರಹದ ಮಾಹಿತಿ ಕೇಂದ್ರಕ್ಕೆ ತೆರಳಿ ಅಲ್ಲಿನ ಸಂಪೂರ್ಣ ಮಾಹಿತಿಯನ್ನು ಪಡೆದು ಇಂದಿನ ನೀರಿನ ಮಟ್ಟ ಮತ್ತು ಅಣೆಕಟ್ಟೆಯ ಒಳ ಹರಿವು ಮತ್ತು ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣದ ಮಾಹಿತಿಯನ್ನು ಅಲ್ಲಿನ ಸಿಬ್ಬಂದಿಯಿAದ ಪಡೆದರು. ನಂತರ ಅಣೆಕಟ್ಟೆಯ ಗೇಟ್‌ಗಳಿಂದ ಹೊರ ಹೋಗುವ ನೀರು ಪರಿವೀಕ್ಷಣೆಯನ್ನು ನಡೆಸಿ ನೀರು ಸಮತೋಲನವನ್ನು ಕಾಪಾಡಿಕೊಂಡು ಹೆಚ್ಚುವರಿಯಾಗಿ ಬರುವ ನೀರನ್ನು ನದಿಗೆ ಹರಿಸುವಂತೆ ಸ್ಥಳದಲ್ಲಿದ್ದ ಇಂಜಿನಿಯರ್ ಅವರಿಗೆ ತಿಳಿಸಿದರು.
ಈ ಸಂದರ್ಭ ಅಣೆಕಟ್ಟೆಯ ಭದ್ರತಾ ಪಡೆಯ ಪೊಲೀಸ್ ವೃತ ನಿರೀಕ್ಷಕ ಚಂದ್ರಶೇಖರ್, ಇಂಜಿನಿಯ ರಿಂಗ್ ಸಿದ್ದರಾಜು, ಸಿಬ್ಬಂದಿಗಳಾದ ಗಿರೀಶ್, ರೆಡ್ಡಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.