ಮಡಿಕೇರಿ, ಜು. ೨೬: ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ ಅಮೃತ ಸರೋವರ ಯೋಜನೆ ಮುಖಾಂತರ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ಕಡಗದಾಳು ಗ್ರಾಮದಲ್ಲಿ ಕಾಟಾಚಾರದಿಂದ ಆಗುತ್ತಿದೆ ಎಂದು ಕಡಗದಾಳು ನಿವಾಸಿಗಳಾದ ಮಾಜಿ ಪಂಚಾಯಿತಿ ಸದಸ್ಯ ಮಾದೇಟಿರ ತಿಮ್ಮಯ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ಅವರುಗಳು ಕಡಗದಾಳು ಗ್ರಾಮಸ್ಥರ ಪರವಾಗಿ ಆಕ್ಷೇಪಿಸಿದರು.
ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದೇಟಿರ ತಿಮ್ಮಯ್ಯ ಅವರು, ಕೇಂದ್ರ ಸರಕಾರದ ಮಹತ್ವದ ಯೋಜನೆಯನ್ನು ಜಿಲ್ಲೆಯ ಅಧಿಕಾರಿಗಳು ತರಾತುರಿಯಲ್ಲಿ ಪೂರ್ಣಗೊಳಿಸಲು ಮುಂದಾಗಿ ದ್ದಾರೆ. ಪ್ರತಿ ಜಿಲ್ಲೆಗೆ ೭೫ ರಂತೆ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ ಕಡಗದಾಳಿನ ಮಾಣಿಕ್ಯ ಕೆರೆಯಲ್ಲಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗುತ್ತಿದೆ. ಯೋಜನೆ ಅನುಷ್ಠಾನಕ್ಕೆ ಪಾಲಿಸಬೇಕಿರುವ ಸರಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಜಿಲ್ಲೆಯ ಅಧಿಕಾರಿಗಳು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಮಳೆ ಸಂದರ್ಭ ಇಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಅವೈಜ್ಞಾನಿಕವೆಂದು ತಿಳಿದಿದ್ದರೂ ಕಳಪೆ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು. ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಮಳೆ ಇರುವ ಪ್ರದೇಶಗಳಲ್ಲಿ ಆಗಸ್ಟ್ ೧೫ ೨೦೨೩ ರವರೆಗೂ ಯೋಜನೆ ಅನುಷ್ಠಾನಕ್ಕೆ ಸಮಯವಿದೆ. ಆದರೆ ಕಡಗದಾಳಿನ ಮಾಣಿಕ್ಯ ಕೆರೆಯನ್ನು ಮುಂದಿನ ತಿಂಗಳ ತಾ.೧೫ ರೊಳಗೆ ಅಭಿವೃದ್ಧಿ ಪಡಿಸುವ ಸಾಹಸಕ್ಕೆ ಅಧಿಕಾರಿಗಳು ಮುಂದಾಗಿದ್ದು, ಕಾಮಗಾರಿ ಕಳಪೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿ.ಇ.ಒ ಅವರುಗಳಿಗೆ ಮನವಿ ಮಾಡಿದರೂ ಕಾಮಗಾರಿಯನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದರು.
ಮಾರ್ಗಸೂಚಿ ಪಾಲನೆಯಾಗಿಲ್ಲ
ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆಯೊಂದನ್ನು ಕರೆದು ಅಮೃತ ಸರೋವರ ಯೋಜನೆ ಅನುಷ್ಠಾನಕ್ಕೆ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸಬೇಕೆಂಬ ನಿಯಮವಿದೆ. ಇದರೊಂದಿಗೆ ಸಾರ್ವಜನಿಕರನ್ನು ಒಳಗೊಂಡ ಸಮಿತಿಯೊಂದನ್ನೂ ರಚಿಸಬೇಕೆಂಬುದಾಗಿ ಮಾರ್ಗಸೂಚಿ ಯಲ್ಲಿ ಉಲ್ಲೇಖವಾಗಿದೆ. ಪಂಚಾಯಿತಿಯವರು ಯಾವುದೇ ಸಭೆಯೂ ಕರೆದಿಲ್ಲ ಹಾಗೂ ಸಮಿತಿಯನ್ನೂ ರಚಿಸಿಲ್ಲ.
ಕೆರೆಯ ಸಂರಕ್ಷಣೆಗಾಗಿ ಮೊದಲು ಅದರಲ್ಲಿನ ಹೂಳು ತೆಗೆಯಬೇಕೆಂಬ ಸಾಮಾನ್ಯ ಜ್ಞಾನ ಕೂಡ ಅಧಿಕಾರಿಗಳಿಗೆ ಇಲ್ಲದಾಗಿದ್ದು, ಕೆರೆ ಸಂಪೂರ್ಣ ತುಂಬಿರುವಾಗಲೇ ಅರ್ಧದಿಂದ ಕಲ್ಲುಗೋಡೆ ಕಟ್ಟಲಾಗಿದೆ. ಕೆರೆಯ ಒಟ್ಟು ವಿಸ್ತೀರ್ಣ ೧.೯೬ ಎಕ್ರೆಯಷ್ಟಿದ್ದು ಕೆಲವರು ಇದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬAಧ ಸರ್ವೇ ಕಾರ್ಯ ನಡೆಸ ಬೇಕೆಂಬ ಸರಕಾರದ ಮಾರ್ಗಸೂಚಿ ಯನ್ನು ಸಂಪೂರ್ಣ ನಿರ್ಲಕ್ಷಿಸಿ ಯಾವುದೇ ಸರ್ವೇ ನಡೆಸದೆ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಕೈಗೆತ್ತಿಕೊಂಡಿರುವ ಅಭಿಯಂತರರಲ್ಲಿ ಕೆರೆಯ ಹೂಳು ತೆಗೆಯುವ ಸಂಬAಧ ವಿಚಾರಿಸಿದರೆ, ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಹೂಳು ತೆಗೆಯಲಾಗುವುದೆಂಬ ಹಾಸ್ಯಾಸ್ಪದ ಉತ್ತರ ನೀಡುತ್ತಾರೆ.
ಕೆರೆಯ ಅಭಿವೃದ್ಧಿಗೆ ಗ್ರಾಮಸ್ಥರ ವಿರೋಧವಿಲ್ಲ. ಆದರೆ ಕಾಮಗಾರಿ ಕಳಪೆಯಾಗಬಾರದು. ಪ್ರಸ್ತುತ ನಡೆಸುತ್ತಿರುವ ಕಾಮಗಾರಿಯನ್ನು ಮಳೆ ಬಿಡುವು ನೀಡಿದ ನಂತರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪಂಚಾಯಿತಿ ಪಿ.ಡಿ.ಓ ಸೇರಿದಂತೆ ಜಿ.ಪಂ. ಸಿ.ಇ.ಒ ಅವರುಗಳು ಕ್ರಮವ ಹಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.