ವೀರಾಜಪೇಟೆ, ಜು. ೨೫: ವರ್ಷಂಪ್ರತಿ ನಡೆಯುವಂತೆ ಮಗ್ಗುಲದ ಶನೀಶ್ವರ ದೇವಾಲಯದಲ್ಲಿ ತಾ. ೩೦ ರ ಮೊದಲ ಶ್ರಾವಣ ಶನಿವಾರದಂದು ಗಣಪತಿ ಹೋಮದೊಂದಿಗೆ ಶ್ರಾವಣ ಮಾಸದ ಪೂಜೆ ಆರಂಭವಾಗಲಿದೆ.
ಆಗಸ್ಟ್ ೬, ಆಗಸ್ಟ್ ೧೩, ಆಗಸ್ಟ್ ೨೦ರ ಶ್ರಾವಣ ಶನಿವಾರದಂದು ಶ್ರಾವಣ ಪೂಜೆ ನಡೆಯಲಿದೆ. ಶ್ರಾವಣ ಶನಿವಾರದಂದು ನವಗ್ರಹ ಪೂಜೆ, ನವಗ್ರಹ ಹೋಮ, ನವಗ್ರಹ ಜಪ ನಡೆಯಲಿದ್ದು, ಪ್ರತಿ ಶನಿವಾರ ನಾಡಿನ ಹಿತಕ್ಕಾಗಿ ಮಹಾಪೂಜೆ ನಡೆಸಲಾಗುತ್ತದೆ. ಶ್ರಾವಣ ಶನಿವಾರದಂದು ಮಧ್ಯಾಹ್ನ ಒಂದು ಗÀಂಟೆಗೆ ಭಕ್ತಾದಿಗಳಿಗೆ ದೇವಾಲಯದ ಆವರಣದಲ್ಲಿ ಅನ್ನ ಸಂತರ್ಪಣೆ ಇರಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಚೋಕಂಡ ರಮೇಶ್ ಅವರು ತಿಳಿಸಿದ್ದಾರೆ.