ಸಿದ್ದಾಪುರ, ಜು. ೨೫: ಸಿದ್ದಾಪುರದ ಬಿಎಂಎಸ್ ಸಂಘಟನೆಯ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆ ನೆರವೇರಿತು. ಸಿದ್ದಾಪುರದ ಬಿಎಂಎಸ್ ಕಚೇರಿಯಲ್ಲಿ ಬಿಎಂಎಸ್ ಸಿದ್ದಾಪುರ ಘಟಕದ ಅಧ್ಯಕ್ಷ ಸೂದನ ಸತೀಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸರಳವಾಗಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ದಿನದ ಮಹತ್ವದ ಕುರಿತು ಸುರೇಶ್ ಎನ್ ಕೆ ಮಾತನಾಡಿದರು. ಈ ಸಂದÀರ್ಭದಲ್ಲಿ ಉಪಾಧ್ಯಕ್ಷರಾದ ಸತೀಶ್ ಸದಸ್ಯರುಗಳಾದ ಗಿರೀಶ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಣಿ, ಸತೀಶ್, ಸುರೇಶ್ ಹಾಜರಿದ್ದರು.