ಸೋಮವಾರಪೇಟೆ, ಜು.೨೫: ಸರ್ಕಾರದ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕಾರ್ಯಾದೇಶ ಪತ್ರ ವಿತರಿಸಿದರು. ತಮ್ಮ ಕಚೇರಿ ಆವರಣದಲ್ಲಿ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸಹಾಯ ಧನವನ್ನು ಸದುಪಯೋಗಪಡಿಸಿಕೊಂಡು ವಾಸಕ್ಕೆ ಯೋಗ್ಯ ರೀತಿಯಲ್ಲಿ ಮನೆಯನ್ನು ನಿರ್ಮಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ನೋಡಲ್ ಅಧಿಕಾರಿ ಪ್ರದೀಪ್, ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ.ಪಂ. ಮಾಜೀ ಅಧ್ಯಕ್ಷೆ ಸುಮಾ ಸುದೀಪ್, ನಾಮನಿರ್ದೇಶನ ಸದಸ್ಯ ಎಸ್.ಆರ್. ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.