ಮಡಿಕೇರಿ, ಜು. ೨೫: ಮೇಕೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು. ನೂತನ ಪಂಚಾಯಿತಿ ಕಟ್ಟಡವು ರೂ. ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ದಿನೇಶ್ ಬಿ.ಬಿ., ಉಪಾಧ್ಯಕ್ಷ ರಕ್ಷಿತ್ ಪಿ.ಯು, ಸದಸ್ಯರಾದ ಹನೀಫ್ ಎಂ.ಯು., ಎ.ಎ. ಅಬ್ದುಲ್ ಖಾದರ್, ಕೆ.ಎನ್. ಕೀರ್ತನ್, ಪುಷ್ಪ ಬಿ.ವಿ., ಮುತ್ತಮ್ಮ ಕೆ.ಎನ್., ಶಕ್ತಿ ಕೇಂದ್ರದ ಪ್ರಮುಖರು, ಸ್ತಿçÃಶಕ್ತಿ ಸಂಘದ ಸದಸ್ಯರು ಹಾಗೂ ಇತರರು ಹಾಜರಿದ್ದರು.