ಸೋಮವಾರಪೇಟೆ, ಜು.೨೫ : ಜನಪ್ರತಿನಿಧಿಗಳು ಹಾಗೂ ಸಂಬAಧಿ ಸಿದ ಇಲಾಖೆಯ ಅಧಿಕಾರಿಗಳ ಅನಾದರಕ್ಕೆ ಒಳಗಾಗಿರುವ ತಾಲೂಕಿನ ತೋಳೂರು ಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡಮನೆಕೊಪ್ಪದ ಮುಖ್ಯರಸ್ತೆ ಆ ದೇವರಿಗೇ ಪ್ರೀತಿ ಎಂಬAತಿದೆ.
ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಸಂಚಾರಕ್ಕೂ ತೊಡಕಾಗಿದೆ. ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ದೊಡ್ಡಮನೆಕೊಪ್ಪದ ರಸ್ತೆಯಂತೂ ವಾಹನ ಸಂಚಾರವಿರಲಿ; ನಡೆ ದಾಡಲೂ ಸಹ ಅಯೋಗ್ಯವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಕಣ್ಣಿದ್ದೂ ಕುರುಡರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೋಳೂರುಶೆಟ್ಟಳ್ಳಿಯಿಂದ ದೊಡ್ಡಮನೆಕೊಪ್ಪ ಗ್ರಾಮ ಸಂಪರ್ಕ ರಸ್ತೆಯಲ್ಲಿ ಗುಂಡಿಗಳ ಮಧ್ಯೆ ಡಾಂಬರು ರಸ್ತೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಅನೇಕ ದಶಕಗಳ ಬೇಡಿಕೆಯಾಗಿರುವ ರಸ್ತೆ ದುರಸ್ತಿ ಕಾಮಗಾರಿಯನ್ನು ಈವರೆಗೆ ನಿರ್ವಹಿಸಲು ಸಂಬAಧಿಸಿದವರಿಗೆ ಸಾಧ್ಯವಾಗಿಲ್ಲ ಎಂಬದೇ ದುರಂತ.
ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂಬ ಮಾತುಗಳು ಆಗಾಗ್ಗೆ ಜನಪ್ರತಿನಿಧಿಗಳ ಬಾಯಿಂದ ಉದುರುತ್ತಲೇ ಇರುತ್ತವೆ. ಆದರೆ ನಮ್ಮ ಗ್ರಾಮದ ರಸ್ತೆಗೆ ಮಾತ್ರ ಮರು ಡಾಂಬರಿನ ಭಾಗ್ಯ ಲಭಿಸಿಲ್ಲ. ನಾವು ಗಳೇನು ಈ ದೇಶದ ಪ್ರಜೆಗಳಲ್ಲವೇ ಎಂಬ ಪ್ರಶ್ನೆ ಸ್ಥಳೀಯರದ್ದು.
ಈ ರಸ್ತೆಯ ಮಧ್ಯೆ ಗುಂಡಿಗಳೇ ಇದ್ದು, ಸಂಚಾರ ನರಕಯಾತನೆ ಯಾಗಿದೆ. ರಸ್ತೆಯಲ್ಲಿನ ಚರಂಡಿಗಳು ದುರಸ್ತಿ ಕಾಣದೆ ಮುಚ್ಚಿಹೋಗಿದ್ದು ಮಳೆ ನೀರು ರಸ್ತೆಗಳ ಮಧ್ಯೆಯೇ ಹರಿಯುತ್ತಿದೆ. ಮಳೆ ಬಂದರೆ ರಸ್ತೆ ಯಾವುದು ಎಂದು ತಿಳಿಯಲು ಸಾಧ್ಯವಾಗದಂತಹ ಸನ್ನಿವೇಶ ಏರ್ಪಡುತ್ತದೆ.
ತೋಳೂರುಶೆಟ್ಟಳ್ಳಿ ಮುಖ್ಯ ರಸ್ತೆಯಿಂದ ದೊಡ್ಡಮನೆಕೊಪ್ಪ ಮಾರ್ಗವಾಗಿ ಚಿಕ್ಕತೋಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೨.೫ ಕಿ.ಮೀ ದೂರದ ರಸ್ತೆಯು ಸಂಪೂರ್ಣ ಹಾಳಾಗಿದೆ. ಈ ಹಿಂದೆ ಜಿ.ಪಂ.ಗೆ ಒಳಪಟ್ಟಿದ್ದ ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಇಲಾಖಾ ಕಚೇರಿಗೆ ಅಲೆದು, ಧರಣಿ ನಡೆಸಿ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇದೀಗ ರಸ್ತೆಯನ್ನು ಲೋಕೋಪ ಯೋಗಿ ಇಲಾಖೆಗೆ ವಹಿಸಲು ಕ್ರಮ ವಹಿಸಲಾಗಿದೆ.
ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗವನ್ನು ಸಾವಿರಾರು ಮಂದಿ ಆಶ್ರಯಿಸಿದ್ದಾರೆ. ಶಾಲಾ ವಾಹನಗಳು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಗ್ರಾಮಕ್ಕೆ ಆಗಮಿಸು ತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಮುಖ್ಯ ರಸ್ತೆಯವರೆಗೂ ಕಾಲ್ನಡಿಗೆಯಲ್ಲಿ ತೆರಳಿ ಬಸ್ ಹಾಗೂ ಶಾಲಾ ವಾಹನದ ಮೂಲಕ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯು ತುಂಬಾ ಕಿರಿದಾಗಿದ್ದು, ಡಾಂಬರು ಕಿತ್ತು ಬಂದು ದಶಕಗಳೇ ಕಳೆದಿವೆ. ರಸ್ತೆಯ ಪಕ್ಕದಲ್ಲಿ ಚರಂಡಿಯೂ ಇಲ್ಲವಾಗಿದೆ. ಪರಿಣಾಮ ಮಳೆ ನೀರು ರಸ್ತೆಯಲ್ಲಿಯೇ ಹರಿದು ರಸ್ತೆಗೆ ಹಾಕಿದ್ದ ಕಲ್ಲುಗಳು ಕಿತ್ತುಬಂದಿವೆ. ರಸ್ತೆಯ ಇಕ್ಕೆಲಗಳಲ್ಲಿ ಗುಂಡಿಗಳು ನಿರ್ಮಾಣ ವಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಸರ್ಕಸ್‌ನಷ್ಟೇ ತ್ರಾಸದಾಯಕ ವಾಗಿದೆ. ಆದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಬಡರೈತರು, ಕೃಷಿಕರೇ ಇರುವ ಈ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿ ಯಾಗದೇ ಇರುವುದರಿಂದ ಕೃಷಿ ಫಸಲನ್ನು ಸಾಗಿಸುವುದು ಸವಾಲಿನ ಕೆಲಸವಾಗಿದೆ. ಗದ್ದೆ, ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಸಂಕಷ್ಟದ ಬದುಕನ್ನು ಯಾರಿಗೆ ವಿವರಿಸೋಣ? ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
ನಮ್ಮ ಗ್ರಾಮ ವ್ಯಾಪ್ತಿಯ ಹಲವು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಗ್ರಾಮದಲ್ಲಿ ೧೦೦ಕ್ಕೂ ಹೆಚ್ಚು ಮನೆಗಳಿದ್ದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿ ಹೊಂಡಗಳೇ ತುಂಬಿವೆ. ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಬಾಡಿಗೆ ವಾಹನಗಳು, ಆಟೋ ರಿಕ್ಷಾಗಳು ಗ್ರಾಮಕ್ಕೆ ಬರುತ್ತಿಲ್ಲ. ತಕ್ಷಣ ರಸ್ತೆ ದುರಸ್ತಿಗೆ ಸಂಬAಧಿಸಿದ ಅಧಿಕಾರಿಗಳು ಮುಂದಾಗಬೇಕೆAದು ಗ್ರಾಮದ ಬಬಿತ್ ಗೌಡ ಮನವಿ ಮಾಡಿದ್ದಾರೆ.
ಈ ಹಿಂದೆ ಜಿ.ಪಂ.ಗೆ ಒಳಪಟ್ಟಿದ್ದ ರಸ್ತೆಯನ್ನು ಅಭಿವೃದ್ಧಿ ಕಾರಣದಿಂದಾಗಿ ಇದೀಗ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಪೆಂಡಿಕ್ಸ್-ಇ ಯೋಜನೆಯಡಿ ರಸ್ತೆ ಅಭಿವೃದ್ಧಿ ಪಡಿಸಲು ಲೋಕೋಪ ಯೋಗಿ ಇಲಾಖೆ ಮುಂದಾಗಿದೆ. ಅನುದಾನ ಲಭ್ಯತೆಯ ಆಧಾರದ ಮೇಲೆ ಕ್ರಿಯಾಯೋಜನೆ ತಯಾರಿ ಸಲು ಇಲಾಖೆ ಕ್ರಮವಹಿಸಿದೆ. ನಮ್ಮ ಇಲಾಖೆಯಿಂದ ಕಳೆದ ಫೆಬ್ರವರಿ ಯಲ್ಲೇ ರಸ್ತೆಯನ್ನು ಪಿಡಬ್ಲೂö್ಯಡಿಗೆ ಹಸ್ತಾಂತರಿಸಲಾಗಿದೆ ಎಂದು ಜಿ.ಪಂ. ಇಂಜಿನಿಯರಿAಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ. ವೀರೇಂದ್ರ ತಿಳಿಸಿದ್ದಾರೆ.