ಮಡಿಕೇರಿ, ಜು. ೨೫: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ನ ೨೨ನೇ ವಾರ್ಷಿಕೋತ್ಸವದ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು ಇದರ ಮಾರ್ಗದರ್ಶನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕನ್ನಡ ಗ್ರಾಮ, ಕಾಸರಗೋಡು ಇದರ ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ೨೦೨೨ ಸೆಪ್ಟೆಂಬರ್ ೧೧ ರಂದು ಕಾಸರಗೋಡು ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ಈ ಸಂಬAಧ ಅಂತರರಾಜ್ಯ ಮಟ್ಟದ ಅಂಚೆ ಕಾರ್ಡ್ ಕಥಾ ಸ್ಪರ್ಧೆ ಮತ್ತು ಅಂಚೆ ಕಾರ್ಡ್ ಚುಟುಕು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಅಂಚೆ ಕಾರ್ಡ್ನಲ್ಲಿ ಸ್ವರಚಿತ ಕಥೆ ಮತ್ತು ಸ್ವರಚಿತ ಚುಟುಕುಗಳನ್ನು ಬರೆದು, ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊAದಿಗೆ ಆಗಸ್ಟ್ ೧೫ರ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಬೇಕು. ಆಯ್ಕೆಯಾದ ಅತ್ಯುತ್ತಮವಾದ ೫೦ ಮಂದಿಗೆ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸ್ವರಚಿತ ಚುಟುಕು ವಾಚನಗೈಯಲು ಅವಕಾಶ ನೀಡಲಾಗುವುದು.
ಶಿವರಾಮ ಕಾಸರಗೋಡು, ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಗ್ರಾಮ, ಕಾಸರಗೋಡು-೬೭೧೧೨೧ ಅಥವಾ ಶಿವರಾಮ ಕಾಸರಗೋಡು, ಮಾಡೂರು, ಅಂಚೆ ಕೋಟೆಕಾರು, ಮಂಗಳೂರು-೫೭೫೦೨೨, ಮೊ. ೯೪೪೮೫೭೨೦೧೬ ಈ ವಿಳಾಸಕ್ಕೆ ಸಾಮಾನ್ಯ ಅಂಚೆ ಮೂಲಕ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.