ವೀರಾಜಪೇಟೆ, ಜು. ೨೫: ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ ೨೦೧ನೇ ಕಿರಣ ಆಗಸ್ಟ್ ೭ ರಂದು ಸಂಜೆ ೩ ರಿಂದ ೫ ಗಂಟೆಯವರೆಗೆ ನಡೆಯಲಿದೆ.
ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸಲಿದ್ದಾರೆ. ಲೇಖಕರು ಮತ್ತು ಕೃಷಿಕರು ಆಗಿರುವ ಕಿಗ್ಗಾಲು ಗಿರೀಶ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೀರಾಜಪೇಟೆಯ ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕ ವಿಪಿನ್ ಬಾಳಿಗ ಅವರು ‘ಜೇಡದ ವಿಸ್ಮಯ ಪ್ರಪಂಚ’ ವಿಚಾರದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಅದೇ ಸಂಜೆ, ಕಿಗ್ಗಾಲು ಗಿರೀಶ ಅವರು ಬರೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತಿತರ ಲೇಖನಗಳು ಎಂಬ ಪುಸ್ತಕವು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜೀ ಅವರು ಬಿಡುಗಡೆಗೊಳಿಸಲಿದ್ದಾರೆ.