ಸೋಮವಾರಪೇಟೆ, ಜು.೨೪: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕಾಜೂರು ಜಂಕ್ಷನ್ನಲ್ಲಿ ಹಾಡಹಗಲೇ ಕಾಡಾನೆಗಳು ಸಂಚರಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಜೀವ ಭಯದಲ್ಲಿ ಸಂಚರಿಸುವAತಾಗಿದೆ.
ನಿನ್ನೆ ದಿನ ಬೆಳಿಗ್ಗೆ ಮೂರು ಆನೆಗಳನ್ನು ಒಳಗೊಂಡ ಹಿಂಡು ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟ ಹಾಗೂ ಅರಣ್ಯದ ನಡುವೆ ಪ್ರತ್ಯಕ್ಷವಾಗಿದ್ದು, ಇದರಲ್ಲಿದ್ದ ಒಂದು ಆನೆ ನೇರವಾಗಿ ರಾಜ್ಯ ಹೆದ್ದಾರಿಯಲ್ಲೇ ಸಾಗಿ ಕೆಲಕಾಲ ಭಯದ ವಾತಾವರಣ ಸೃಷ್ಟಿಸಿತ್ತು.
ಈ ಭಾಗದಲ್ಲಿ ಕಾಡಾನೆಗಳ ಓಡಾಟ ಮಾಮೂಲಿಯಂತಾಗಿದ್ದು, ಅರಣ್ಯ ಇಲಾಖೆಯಿಂದ ಸೋಲಾರ್ ಬೇಲಿ, ಆನೆ ಕಂದಕ ಕಾಮಗಾರಿ ನಡೆಯುತ್ತಿದ್ದರೂ ಪರಿಣಾಮಕಾರಿ ಯಾಗುತ್ತಿಲ್ಲ. ಇದರಿಂದಾಗಿ ಕಾಡಾನೆಗಳ ಓಡಾಟ ಎಗ್ಗಿಲ್ಲದೇ ಸಾಗಿದೆ. ಸ್ಥಳೀಯ ನಿವಾಸಿಗಳು ಜೀವ ಕೈಯಲ್ಲಿಡಿದುಕೊಂಡು ಓಡಾಡಬೇಕಿದೆ ಎಂದು ಯಡವಾರೆ ಗ್ರಾಮದ ಅಶೋಕ್ ಆರೋಪಿಸಿದ್ದಾರೆ.
ಕೋವರ್ಕೊಲ್ಲಿ ಜಂಕ್ಷನ್ನಿAದ ಐಗೂರು, ಕಾಜೂರು, ಯಡವಾರೆ ಭಾಗದಲ್ಲಿ ಕಾಡಾನೆಗಳ ಸಂಚಾರ ನಿರಂತರವಾಗಿದೆ. ಈ ಹಿಂದೆ ಹಲವಷ್ಟು ಪ್ರಾಣ ಹಾನಿ, ವಾಹನ ಹಾನಿಗಳು ಸಂಭವಿಸಿವೆ. ಅರಣ್ಯದಿಂದ ಆಗಮಿಸುವ ಆನೆಗಳು ಕಾಫಿ ತೋಟ, ಜನವಸತಿ ಪ್ರದೇಶದಲ್ಲಿಯೇ ಬೀಡುಬಿಡುತ್ತಿವೆ. ಕಾಡಾನೆಗಳ ಉಪಟಳ ತಡೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಮಾಡಿದ ಮನವಿ ಅರಣ್ಯರೋಧನವಾಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಆನೆಗಳನ್ನು ಅರಣ್ಯಕ್ಕೆ ಅಟ್ಟಿ ಅವುಗಳು ಮತ್ತೆ ವಾಪಸ್ ನಾಡಿಗೆ ಆಗಮಿಸದಂತೆ ಸೋಲಾರ್ ಬೇಲಿ, ಕಂದಕ ಕಾಮಗಾರಿಯನ್ನು ನಿರ್ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.