ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ
ನವದೆಹಲಿ, ಜು. ೨೪: ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ದೇಶದ ನೂತನ ರಾಷ್ಟçಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ತಾ. ೨೫ ರಂದು (ಇಂದು) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಬೆಳಿಗ್ಗೆ ೧೦.೧೫ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಸೇನಾ ಸಿಬ್ಬಂದಿ ೨೧ ಬಾರಿ ಕುಶಾಲ ತೋಪು ಸಿಡಿಸಿದ ನಂತರ ರಾಷ್ಟçಪತಿಯಾಗಿ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರ ಭಾಷಣ ಮಾಡಲಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.ಸಮಾರಂಭಕ್ಕೂ ಮುನ್ನ, ನಿರ್ಗಮಿಸುವ ಅಧ್ಯಕ್ಷರು ಮತ್ತು ಅಧ್ಯಕ್ಷರಾಗಿ ಆಯ್ಕೆಯಾದವರು ವಿಧ್ಯುಕ್ತ ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸುತ್ತಾರೆ. ಉಪ ರಾಷ್ಟçಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಚಿವರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ರಾಜತಾಂತ್ರಿಕ ಕಾರ್ಯಗಳ ಮುಖ್ಯಸ್ಥರು, ಸಂಸದರು ಮತ್ತು ಸರ್ಕಾರದ ಪ್ರಧಾನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭದ ಮುಕ್ತಾಯದ ನಂತರ ರಾಷ್ಟçಪತಿಗಳು ರಾಷ್ಟçಪತಿ ಭವನಕ್ಕೆ ತೆರಳುತ್ತಾರೆ, ಅಲ್ಲಿ ಅವರಿಗೆ ಸೇನಾ ಗೌರವ ನೀಡಲಾಗುತ್ತದೆ ಮತ್ತು ನಿರ್ಗಮಿತ ರಾಷ್ಟçಪತಿಗೂ ಗೌರವ ಸಲ್ಲಿಸಲಾಗುತ್ತದೆ.
ದೇಶದಲ್ಲಿ ೪ನೇ ಮಂಕಿಪಾಕ್ಸ್ ಪ್ರಕರಣ: ಉನ್ನತಮಟ್ಟದ ಸಭೆ
ನವದೆಹಲಿ, ಜು. ೨೪: ದೇಶದಲ್ಲಿ ಮಂಕಿಪಾಕ್ಸ್ನ ೪ನೇ ಪ್ರಕರಣ ವರದಿಯಾಗಿದ್ದು, ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿದೆ. ಭಾನುವಾರದಂದು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶನಾಲಯದಿಂದ ಈ ಉನ್ನತಮಟ್ಟದ ಸಭೆ ನಡೆದಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ರಾಷ್ಟçರಾಜಧಾನಿಗೂ ಮಂಕಿ ಪಾಕ್ಸ್ ಸೋಂಕು ಹರಡಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇದ್ದರೂ ಸೋಂಕು ಪತ್ತೆಯಾಗಿದೆ. ೩೧ ವರ್ಷದ ವ್ಯಕ್ತಿಗೆ ಮೈಮೇಲೆ ಗುಳ್ಳೆಗಳು ಹಾಗೂ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ಸ್ಥಿರತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೋಂಕಿತನನ್ನು ಐಸೊಲೇಷನ್ ಮಾಡಲು ಸೂಚನೆ ನೀಡಲಾಗಿದೆ. ಸೋಂಕು ಹರಡದಂತೆ ಗೈಡ್‌ಲೈನ್ ಅನುಸರಿಸಲು ಸಲಹೆ ನೀಡಿ. ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಮಂಕಿಪಾಕ್ಸ್ ರೋಗ ಲಕ್ಷಣ ಕಾಣಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ದೆಹಲಿಯ ನಿವಾಸಿಯಾಗಿರುವ ವ್ಯಕ್ತಿಯನ್ನು ಮೂರು ದಿನಗಳ ಹಿಂದೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.
ಸಚಿವರ ಆಪ್ತೆ ಮನೆಯಲ್ಲಿ ರೂ. ೨೦ ಕೋಟಿ ಜಪ್ತಿ
ಕೋಲ್ಕತ್ತಾ, ಜು. ೨೪: ಬಂಧಿತ ಬಂಗಾಳದ ಸಚಿವ ಪಾರ್ಥ ಚಟರ್ಜಿ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಕಾಲಮಿತಿಯ ತನಿಖೆಗೆ ತೃಣಮೂಲ ಕಾಂಗ್ರೆಸ್(ಟಿಎAಸಿ) ಒತ್ತಾಯಿಸಿದೆ. ಪಕ್ಷದ ಯಾವುದೇ ನಾಯಕರು ಯಾವುದೇ ತಪ್ಪು ಮಾಡಿದ್ದರೆ ಅದರಲ್ಲಿ ಪಕ್ಷವು ರಾಜಕೀಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರತಿಪಾದಿಸಿದೆ. ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಣದ ಜಾಡು ಹಿಡಿದಿರುವ ತನಿಖೆಯ ಭಾಗವಾಗಿ ಇಡಿ ಸಿಬ್ಬಂದಿ ತಾ. ೨೨ ರಂದು ಬಂಗಾಳದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಈ ಹಿಂದೆ ಶಿಕ್ಷಣ ಖಾತೆಯನ್ನು ಹೊಂದಿದ್ದ ಕೈಗಾರಿಕಾ ಸಚಿವ ಚಟರ್ಜಿಯವರ ನಿಕಟವರ್ತಿಯಾಗಿರುವ ಮಹಿಳೆಯೊಬ್ಬರ ನಿವಾಸದಿಂದ ಕನಿಷ್ಟ ೨೦ ಕೋಟಿ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಕಾಲಮಿತಿಯ ತನಿಖೆಗೆ ಪಕ್ಷವು ಒತ್ತಾಯಿಸುತ್ತದೆ ಎಂದರು. ಬಹುಕೋಟಿ ಶಾರದಾ ಚಿಟ್ ಫಂಡ್ ಪ್ರಕರಣವನ್ನು ೨೦೧೪ ರಿಂದ ಸಿಬಿಐ ತನಿಖೆ ನಡೆಸುತ್ತಿದೆ. ೨೦೧೬ ರ ಚುನಾವಣೆಗೆ ಮುಂಚಿತವಾಗಿ ತೆರೆದುಕೊಂಡಿರುವ ನಾರದ ಟೇಪ್ ಪ್ರಕರಣವು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ. ಎಷ್ಟೇ ದೊಡ್ಡ ನಾಯಕ ಹಗರಣದಲ್ಲಿ ತೊಡಗಿಸಿಕೊಂಡರೂ ತೃಣಮೂಲ ಕಾಂಗ್ರೆಸ್ ಮಧ್ಯಪ್ರವೇಶಿಸುವುದಿಲ್ಲ ಎಂದು ಘೋಷ್ ಹೇಳಿದರು.
೪೫ ಲಕ್ಷ ರೂಪಾಯಿ ಹಸ್ತಾಂತರಿಸಿದ ಟ್ರಾಫಿಕ್ ಪೊಲೀಸ್
ರಾಯಪುರ, ಜು. ೨೪: ಛತ್ತೀಸ್‌ಗಢದ ಟ್ರಾಫಿಕ್ ಪೊಲೀಸ್‌ವೊಬ್ಬರು ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದ ವೇಳೆ ೪೫ ಲಕ್ಷ ರೂಪಾಯಿ ಉಳ್ಳ ಬ್ಯಾಗ್ ಸಿಕ್ಕಿದೆ. ಈ ಬ್ಯಾಗ್ ಅನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿ ಸುವ ಮೂಲಕ ಅವರು ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಶನಿವಾರ ಟ್ರಾಫಿಕ್ ಪೊಲೀಸ್‌ವೊಬ್ಬರು ರೂ. ೪೫ ಲಕ್ಷ ಇರುವ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ. ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ರೂ. ೨೦೦೦ ಮತ್ತು ರೂ. ೫೦೦ ನೋಟುಗಳ ಕಂತೆ ಕಂಡುಬAದಿದೆ. ಈ ಬ್ಯಾಗ್‌ನಲ್ಲಿ ಒಟ್ಟು ೪೫ ಲಕ್ಷ ರೂಪಾಯಿ ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗನ್ನು ಹಸ್ತಾಂತರಿಸಿದ್ದಾರೆ ಎಂದರು.
ಭೀಕರ ರಸ್ತೆ ಅಪಘಾತ-ಪೊಲೀಸರ ದುರ್ಮರಣ
ಚಿತ್ತೂರು, ಜು. ೨೪: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಕರ್ತವ್ಯದ ಮೇರೆಗೆ ತಿರುಪತಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪುತಲಪಟ್ಟು ಮಂಡಲದ ಪಿ. ಕೊಟ್ಟಕೋಟದಲ್ಲಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯ ಗೊಂಡಿದ್ದಾರೆ. ಸ್ಥಳಕ್ಕೆ ಚಿತ್ತೂರು ಡಿವೈಎಸ್‌ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಸಾವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ. ಪಿಎಸ್‌ಐ ಅವಿನಾಶ್ (೨೯) ಕಾನ್ಸ್ಟೇಬಲ್ ಅನಿಲ್ ಮುಳಿಕ್ (೨೬) ಕ್ಯಾಬ್ ಚಾಲಕ ಜೋಸೆಫ್ (೨೮) ಮೃತಪಟ್ಟವರು. ಕಾನ್ಸ್ಟೇಬಲ್‌ಗಳಾದ ದೀಕ್ಷಿತ್, ಶರಣ ಬಸವ ಗಂಭೀರವಾಗಿ ಗಾಯ ಗೊಂಡಿದ್ದು, ಚಿತ್ತೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್‌ಐ ಅವಿನಾಶ್ ಬೀದರ್ ಜಿಲ್ಲೆ ಬಸವ ಕಲ್ಯಾಣದ ರೋಲವಾಡಿ ಗ್ರಾಮದವರು. ಈ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗಾಂಜಾ ಕೇಸ್ ಸಂಬAಧ ಆರೋಪಿಯನ್ನು ಬಂಧಿಸಲು ತಿರುಪತಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಿಎಸ್‌ಐ ಸೇರಿದಂತೆ ಮೂವರ ದುರ್ಮರಣಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು: ತುರ್ತು ಪರಿಸ್ಥಿತಿ ಘೋಷಣೆ!
ವಾಷಿಂಗ್ಟನ್, ಜು. ೨೪: ಯೊಸೆಮೈಟ್ ರಾಷ್ಟಿçÃಯ ಉದ್ಯಾನದ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಜನರನ್ನು ಸ್ಥಳಾಂತರಿಸಿದ ಬಳಿಕ ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಮಾರಿಪೋಸಾ ಕೌಂಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಗವರ್ನರ್ ಕಚೇರಿ ನೀಡಿರುವ ಮಾಹಿತಿ ಯಲ್ಲಿ, “ಗವರ್ನರ್ ಗೇವಿನ್ ನ್ಯೂಸಮ್ ಇಂದು ಮಾರಿಪೋಸಾ ಕೌಂಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಓಕ್ ಕಾಡುಗಳಲ್ಲಿ ಭೀಕರ ಬೆಂಕಿಯಿAದಾಗಿ ಮನೆಗಳು ಮತ್ತು ಇತರ ನಿರ್ಮಾಣ ಕಟ್ಟಡಗಳು ಅಪಾಯಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಿ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ಓಕ್ ಕಾಡುಗಳಲ್ಲಿನ ಬೆಂಕಿ ಅನಾಹುತ ೧೧ ಸಾವಿರ ೫೦೦ ಎಕರೆಗೂ ಹೆಚ್ಚು ಪ್ರದೇಶವನ್ನು ಸುಟ್ಟುಹಾಕಿದೆ. ಮಾರಿಪೋಸಾ ಕೌಂಟಿಯ ಮಿಡ್‌ಪೈನ್ಸ್ ಪಟ್ಟಣದ ಬಳಿ ಶುಕ್ರವಾರ ಮಧ್ಯಾಹ್ನದ ಬಳಿಕ ವ್ಯಾಪಕವಾಗಿ ಹರಡಿದೆ. ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿ ನಿಯಂತ್ರಣ ಇಲಾಖೆ ನೀಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಓಕ್ ಅರಣ್ಯದಲ್ಲಿ ಬೆಂಕಿ ೧೧,೯೦೦ ಎಕರೆ ಪ್ರದೇಶವನ್ನು ನಾಶಪಡಿಸಿದೆ ಮತ್ತು ಬೆಂಕಿಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.