ಮಡಿಕೇರಿ, ಜು. ೨೪: ಸರ್ಕಾರಿ ಬಸ್ಗೆ ಕಾರೊಂದು ಡಿಕ್ಕಿಯಾಗಿ ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ.
ಮಂಗಳೂರಿನಿAದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ಗೆ (ಕೆಎ -೧೯- ಎಫ್-೩೪೧೨) ದೇವರಕೊಲ್ಲಿ ಬಳಿ ಅತಿವೇಗದಿಂದ ಬಂದ ನ್ಯಾನೋ ಕಾರು (ಕೆಎಲ್-೧೪- ಎಲ್-೬೮೯೦) ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಚಾಲಕ ಅಬೂಬಕರ್ ಸಿದ್ಧಿಕ್ ಹಾಗೂ ಮತ್ತೋರ್ವನಿಗೆ ಗಾಯಗಳಾಗಿವೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.