ವೀರಾಜಪೇಟೆ, ಜು. ೨೪: ಉತ್ತಮ ಶಿಕ್ಷಣ ಪಡೆದಿರುವ ವ್ಯಕ್ತಿಯು ಉತ್ತಮ ಸಮಾಜ ರೂಪಿಸಬಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ವೀರಾಜಪೇಟೆಯ ಅಧ್ಯಕ್ಷ, ನ್ಯಾಯಾಧೀಶರಾದ ಲೋಕೇಶ್ ಎಂ.ಜಿ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ವೀರಾಜಪೇಟೆ ಮತ್ತು ವಕೀಲರ ಸಂಘ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವೀರಾಜಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲೆಯ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಕಾನೂನು ಸಾಕ್ಷರತೆ ಮತ್ತು ವಿಶ್ವ ಅಂರ‍್ರಾಷ್ಟಿçÃಯ ನ್ಯಾಯ ದಿನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಲೋಕೇಶ್ ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮೂರು ಅಂಗಗಳ ಅಡಿಪಾಯದಡಿಯಲ್ಲಿ ಸಂವಿಧಾನವು ರಚನೆಗೊಂಡಿದೆ.

ಸರ್ವರು ಸಮಾನರು ಎಂಬ ಉದಾತ್ಮವಾದ ಭಾವನೆಯಿಂದಾಗಿ ಮಕ್ಕಳಲ್ಲಿ ಇಳಿ ವಯಸ್ಸಿನಲ್ಲೇ ಸರ್ವರು ಸಮಾನರು ಎಂಬ ಭಾವನೆಗಳು ಮೈಗೂಡಬೇಕು. ಇದರಿಂದಾಗಿ ಸಮಾನತೆಯು ಜಾಗೃತವಾಗುತ್ತದೆ ಎಂದು ಹೇಳಿದರು.

ವೀರಾಜಪೇಟೆ ವಕೀಲರ ಸಂಘದ ಸದಸ್ಯ ಎನ್. ನರೇಂದ್ರ ಕಾಮತ್ ಅವರು ‘ಮಕ್ಕಳ ಹಕ್ಕುಗಳ ಕಾನೂನು ಸಾಕ್ಷರತೆ ಮತ್ತು ವಿಶ್ವ ಅಂರ‍್ರಾಷ್ಟಿçÃಯ ನ್ಯಾಯ ದಿನ ಕಾರ್ಯಕ್ರಮದ ಬಗ್ಗೆ ಉಪನ್ಯಾಸ ನೀಡಿದರು. ಶಿಕ್ಷಣವು ವ್ಯಾಪಾರಿಕರಣದತ್ತ ಸಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಅವರು ಮಾತನಾಡಿ, ಶಾಲಾ ದಿನಗಳಲ್ಲಿ ದೇಶದ ಸಂವಿಧಾನವು ನೀಡಿರುವ ಮಕ್ಕಳ ಹಕ್ಕುಗಳ ಬಗ್ಗೆ ಅರಿತುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರತಿಕಾ ಕೆ.ಎ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ವಿವಿಧ ಸಂಘದ ಪದಾಧಿಕಾರಿಗಳಿಗೆ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ವೀರಾಜಪೇಟೆ ಸದಸ್ಯ ಕಾರ್ಯದರ್ಶಿ ನ್ಯಾ. ಸಂತೋಷ ಕೊಠಾರಿ, ವೀರಾಜಪೇಟೆ ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು.

ಶಿಕ್ಷಕರಾದ ಅನಿತ ನರೋನ ಸ್ವಾಗತಿಸಿ, ನಸ್ಸಿಮಾ ನಿರೂಪಿಸಿದರು. ಶಿಕ್ಷಕರಾದ ರಂಜನಿ ವಂದಿಸಿದರು. ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು, ಪ್ರೌಢಶಾಲೆಯ ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.