ಸಿದ್ದಾಪುರ, ಜು. ೨೪: ಸಿ.ಐ.ಟಿ.ಯು ಜಿಲ್ಲಾ ಸಂಘಟನೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಜಿ.ಎಸ್.ಟಿ. ಯನ್ನು ವಿರೋಧಿಸಿ ಸಿದ್ದಾಪುರದಲ್ಲಿ ಭಾನುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಸಿದ್ದಾಪುರದ ಸಿ.ಪಿ.ಐ.(ಎಂ) ಕಚೇರಿಯಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸಿ.ಐ.ಟಿ.ಯು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಸಂಘಟನೆಯ ಪ್ರಮುಖರಾದ ಎಸ್.ಡಿ. ಕುಟ್ಟಪ್ಪ, ಹೆಚ್.ಬಿ. ರಮೇಶ್, ಪಿ.ಆರ್. ಭರತ್, ಅಬ್ದುಲ್ ರೆಹಮಾನ್ ಇನ್ನಿತರರು ಹಾಜರಿದ್ದರು.