ಮಡಿಕೇರಿ, ಜು. ೨೪: ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಕಾರಣ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸರಕಾರ ವಿಜ್ಞಾನಿಗಳ ನೆರವು ಪಡೆದು ವರದಿ ತಯಾರಿಸಿ ಸೂಕ್ತ ಕ್ರಮಕೈಗೊಳ್ಳಲಾಗು ವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಬಿ.ಸಿ. ನಾಗೇಶ್ ಭರವಸೆ ನೀಡಿದರು.ಮದೆನಾಡು ಸಮೀಪದಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮದೆನಾಡು ಬಳಿ ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಜಾಗದಲ್ಲಿ ಇದೀಗ ಮತ್ತೊಮ್ಮೆ ಭೂಕುಸಿತಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವೈಜ್ಞಾನಿಕ ವರದಿ ಅಗತ್ಯವಾಗಿರುವ ಕಾರಣ ಜಿಲ್ಲೆಗೆ ವಿಜ್ಞಾನಿಗಳ ತಂಡವನ್ನು ಕಳುಹಿಸಿ ಅವರು ಪರಿಶೀಲಿಸಿ ಕಾರಣ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕಾದ ಬಗ್ಗೆ ತಾಂತ್ರಿಕವಾಗಿ ವರದಿ ನೀಡಿದ ಬಳಿಕ ಸರಕಾರ ಇದಕ್ಕೆ ಅಗತ್ಯ ಕ್ರಮವಹಿಸಲಿದೆ ಎಂದು ಹೇಳಿದರು.

ಮಣ್ಣು ಜಾರಿದ ಪರಿಣಾಮ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ೨೦೧೮ರಲ್ಲಿಯೂ ವೈಜ್ಞಾನಿಕ ವರದಿ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಭೂಕುಸಿತ ಸಂಭವಿಸಿದೆ. ಈ ಸಂಬAಧ ಪರಿಹಾರ ಮಾರ್ಗೋ ಪಾಯ ಕಂಡುಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಉಂಟಾದ ಭೂಕಂಪನದ ನಂತರವೂ ನುರಿತರು ಆಗಮಿಸಿದ್ದರು. ಮಳೆಗಾಲ ಮುಗಿದ ಬಳಿಕ ವೈಜ್ಞಾನಿಕ ಕಾರಣ ತಿಳಿದುಕೊಳ್ಳಬಹುದಾಗಿದೆ ಎಂದರು.

ಅಪಾಯದ ನಡುವೆ ವಾಸಿಸುತ್ತಿ ರುವವರು ಸ್ಥಳಾಂತರ ಗೊಳ್ಳಬೇಕಾಗಿದೆ. ಮದೆನಾಡು ಸಮೀಪ ೩ ಕುಟುಂಬಗಳು ಸ್ಥಳಾಂತರಗೊಳ್ಳಲು ಮನವಿ ಮಾಡಿದ್ದೇವೆ. ಸ್ಥಳಾಂತರಗೊAಡ ವರಿಗೆ ಬೇಕಾದ ಅಗತ್ಯ ಸೌಲಭ್ಯ ಸರಕಾರ ನೀಡಲಿದೆ. ಮಳೆಗಾಲದ ತನಕ ಅಪಾಯದಲ್ಲಿ ವಾಸಿಸದಂತೆ ಮನವಿ ಮಾಡಿದ ಸಚಿವರು, ಭೂಕಂಪನ ಮತ್ತು ಭೂಕುಸಿತಕ್ಕೆ ಯಾವುದೇ ಸಂಬAಧವಿಲ್ಲ. ಭೂಕಂಪನದ ಕೇಂದ್ರಬಿAದು ಬೇರೆಡೆ ಇದ್ದು, ಅದರ ವ್ಯಾಪ್ತಿ ಕೂಡ ಇಲ್ಲಿಗೆ ಬರುವುದಿಲ್ಲ ಎಂದು ತಿಳಿಸಿದರು.

ಜೋಡುಪಾಲ ಸಮೀಪದಲ್ಲಿ ಮಳೆಯಿಂದ ಹಾನಿಯಾದ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲಿಸಿದರು. ಸೇತುವೆಯನ್ನು ಕೂಡಲೇ ಸರಿಪಡಿಸುವಂತೆ ಸಂಬAಧಪಟ್ಟ ಇಂಜಿನಿಯರ್‌ಗೆ ಸೂಚಿಸಿದರು.

ಈ ಸಂದರ್ಭ ಶಾಸಕರುಗಳಾದ ಶಾಸಕ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಉಪವಿಭಾಗಧಿಕಾರಿ ಯತೀಶ್ ಉಲ್ಲಾಳ, ತಹಶೀಲ್ದಾರ್ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.