ವೀರಾಜಪೇಟೆ, ಜು. ೨೪: ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಂದೇಶವನ್ನು ಗುರಿಯಾಗಿಸಿಕೊಂಡು ಧರ್ಮದ ಯುವಕ ಮತ್ತು ಕುಟುಂಬಕ್ಕೆ ಮಾನಸಿಕವಾಗಿ ಆಘಾತ ಮತ್ತು ಅಪಮಾನವಾಗಿದೆ. ಇದೀಗ ಬಂಧಿತ ಆಪಾದಿತ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ನಗರ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.
ವೀರಾಜಪೇಟೆ ನಗರ ಮುಸ್ಲಿಂ ಒಕ್ಕೂಟದ ವತಿಯಿಂದ ಶಾಫಿ ಜುಮ್ಮ ಮಸೀದಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಮೊಹಮ್ಮದ್ ರಾಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಂದೇಶದ ವ್ಯಕ್ತಿಯನ್ನು ಪೊಲೀಸ್ ಇಲಾಖೆ ಬಂಧನ ಮಾಡಿರುವುದು ಸ್ವಾಗತಾರ್ಹ. ಕೊಡಗು ಜಿಲ್ಲೆಯಲ್ಲಿ ಧರ್ಮ ಧರ್ಮಗಳ ಬಗ್ಗೆ ಕಂದಕ ನಿರ್ಮಾಣ ಮಾಡುವಂತೆ ಮುಸ್ಲಿಂ ಧರ್ಮದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಲವಾರು ಬಾರಿ ನಿಂದಿಸುವAತಹ ಕೃತ್ಯಗಳು ನಡೆಯುತ್ತಿದೆ. ಅಲ್ಲದೆ ಪದೇಪದೇ ದೌರ್ಜನ್ಯಗಳು ನಡೆಯುತ್ತಾ ಬರುತ್ತಿವೆ ಎಂದರು. ಬಂಧಿತ ವ್ಯಕ್ತಿಯ ಪೂರ್ವಾಪರ ಮತ್ತು ಈತ ಮಾಡಿರುವ ಕೃತ್ಯದ ಬಗ್ಗೆ ಇಲಾಖೆಯು ಕೂಲಂಕಷವಾಗಿ ತನಿಖೆಗೆ ಒಳಪಡಿಸಬೇಕು ಅಲ್ಲದೆ, ಸಂದೇಶದ ಹಿಂದಿರುವ ಷಡ್ಯಂತ್ರದ ಬಗ್ಗೆಯು ಸಾರ್ವಜನಿಕರಿಗೂ ತಿಳಿಯಪಡಿಸುವಂತೆ ಮತ್ತು ಧರ್ಮ ವಿರೋಧಿ ಮಾಡಿರುವ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಮುಸ್ಲಿಂ ಒಕ್ಕೂಟದ ವತಿಯಿಂದ ಆಗ್ರಹಿಸುವುದಾಗಿ ಹೇಳಿದರು.
ಇಮಾಂ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಮಾತನಾಡಿ, ಯಾವುದೇ ಧರ್ಮಗಳ ಲಾಂಛನಗಳ ಧರ್ಮ ವಿಶ್ವಾಸಿಗಳ ನಂಬಿಕೆಯನ್ನು ಅವಹೇಳನ ಮಾಡುವುದು ಮತ್ತು ಕ್ಷÄಲ್ಲಕವಾಗಿ ಕಾಣುವುದು ಘೋರ ಅಪರಾಧವಾಗಿದೆ ಎಂದು ಹೇಳಿದರು.
ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷ ಟಿ.ಎಂ. ಅಬ್ದುಲ್ ರಜಾಕ್, ಶಾದಲಿ ಮಸೀದಿ ಅಧ್ಯಕ್ಷರಾದ ಹುಸೇನ್ ಹಾಜಿ, ಮದೀನಾ ಮಸೀದಿಯ ಅಧ್ಯಕ್ಷರಾದ ಎಸ್.ಹೆಚ್. ಮೈನುದ್ದೀನ್, ಸಲಫಿ ಮಸೀದಿಯ ಅಧ್ಯಕ್ಷರಾದ ಶರೀಫ್, ಮಸ್ಜಿದ್ ಈ ಅಜಾಂ ಪ್ರಮುಖರಾದ ನಿಸಾರ್ ಅಹಮ್ಮದ್, ಇಮಾಂ ಮಸೀದಿಯ ಪ್ರಮುಖರಾದ ಅಬ್ದುಲ್ ರೆಹಮಾನ್, ನೂರುಲ್ ಇಸ್ಲಾಂ ಮಸೀದಿಯ ಪ್ರಮುಖರಾದ ಹ್ಯಾರಿಸ್ ಮತ್ತು ಅನ್ವರುಲ್ ಹುದಾ ಮಸೀದಿಯ ಪ್ರಮುಖರಾದ ಇಬ್ರಾಹಿಂ ಹಾಗೂ ವಿವಿಧ ಮಸೀದಿಗಳ ಪ್ರಮುಖರು ಹಾಜರಿದ್ದರು.