ಜು. ೨೪: ಇಲ್ಲಿನ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಸಂಸ್ಥೆಯ ೨೦೨೨-೨೩ನೇ ಸಾಲಿನ ಪದಗ್ರಹಣ ಸಮಾರಂಭ ಸಾಕ್ಷಿ ಕನ್ವೆನ್‌ಷನ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿಕಟಪೂರ್ವ ಜಿಲ್ಲಾ ಅಧ್ಯಕ್ಷೆ ರಾಜೇಶ್ವರಿ ಆರ್. ಗೌಡ ಮಾತನಾಡಿ, ಯಾವುದೇ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಿದರೂ ಮೊದಲು ಹೃದಯವಂತಿಕೆ ಇರಬೇಕು. ಪ್ರಾರ್ಥಿಸುವ ಸ್ತುತಿಗಿಂತ ದಾನ ಮಾಡುವ ಕೈಗಳಾಗಬೇಕು. ಸಾರ್ವಜನಿಕ ಅಥವಾ ಸಮುದಾಯದ ಕೆಲಸ ಮಾಡುವಾಗ ಪರೋಪಕಾರವೇ ನಮ್ಮ ಧ್ಯೇಯವಾಗಿರಬೇಕು ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆಶಾ ಯೋಗೇಂದ್ರ, ಮುಖ್ಯ ಅತಿಥಿಗಳಾದ ಜಿಲ್ಲಾ ಉಪಾಧ್ಯಕ್ಷೆ ಪೂರ್ಣಿಮಾ ರವಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾದ ಪ್ರೇಮ ಹೃಷಿಕೇಶ್ ಮತ್ತು ಕಾರ್ಯದರ್ಶಿ ಅಮೃತಾ ಕಿರಣ್ ಸೇರಿದಂತೆ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಇದೇ ಸಂದರ್ಭ ಸಂಸ್ಥೆಯಿAದ ಪ್ರಕಟಗೊಳ್ಳುವ ಬುಲೆಟಿನ್ ಬಿಡುಗಡೆ ಮಾಡಲಾಯಿತು.