ವರದಿ:ಚಂದ್ರಮೋಹನ್ಕುಶಾಲನಗರ, ಜು. ೨೪: ಮಡಿಕೇರಿ-ಕುಶಾಲನಗರ-ಮೈಸೂರು ಸಂಪರ್ಕಕಲ್ಪಿಸುವ ರಾಷ್ಟಿçÃಯ ಹೆದ್ದಾರಿ ಸಂಖೈ ೨೭೫ ಅವಘಡಗಳ ಹೆದ್ದಾರಿಯಾಗಿ ಪರಿವರ್ತನೆ ಗೊಂಡAತಿದೆ. ಕಳೆದ ಕೆಲವು ತಿಂಗಳುಗಳ ಅವಧಿಯಿಂದ ಮಡಿಕೇರಿಯಿಂದ ಕುಶಾಲನಗರ ತನಕ ಹಲವು ವಾಹನ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು, ಕೆಲವೇ ದಿನಗಳ ಅಂತರದಲ್ಲಿ ೧೦೦ಕ್ಕೂ ಅಧಿಕ ಅಪಘಾತ ಪ್ರಕರಣಗಳು ಕಂಡುಬAದಿವೆ. ಇವುಗಳಲ್ಲಿ ಕುಶಾಲನಗರ ಉಪವಿಭಾಗ ವ್ಯಾಪ್ತಿಯಲ್ಲಿ ಜೂನ್ ಅಂತ್ಯದೊಳಗೆ ೫೦ ಕ್ಕೂ ಅಧಿಕ ಅಪಘಾತ ಪ್ರಕರಣಗಳು ದಾಖಲಾಗಿವೆ. ೧೦ಕ್ಕೂ ಮಿಕ್ಕಿ ಘಟನೆಗಳಲ್ಲಿ ೧೦ ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ೪೫ಕ್ಕೂ ಅಧಿಕ ಸಾಮಾನ್ಯ ಅಪಘಾತಗಳು ಸಂಭವಿಸಿದ್ದು, ೬೫ಕ್ಕೂ ಅಧಿಕ ಮಂದಿ ತೀವ್ರ ಗಾಯಕ್ಕೆ ಒಳಗಾಗಿದ್ದಾರೆ.
ಹೆಲ್ಮೆಟ್ ರಹಿತ ವಾಹನ ಚಾಲನೆ, ಮೊಬೈಲ್ ಬಳಕೆ, ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಸೇರಿದಂತೆ ವಾಹನ ಚಾಲಕರ ನಿರ್ಲಕ್ಷವೇ ಈ ಅಪಘಾತಗಳಿಗೆ ಪ್ರಮುಖ ಕಾರಣವೆನ್ನುತ್ತಾರೆ. ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಶೈಲೇಂದ್ರಕುಮಾರ್ ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ, ಬೀದಿ ಬದಿ ವ್ಯಾಪಾರಿಗಳಿಂದ ಹೆದ್ದಾರಿ ಒತ್ತುವರಿ ಇವುಗಳು ಕೂಡ ಪಾದಚಾರಿಗಳ ಜೀವಕ್ಕೆ ಕುತ್ತು ತರುವ ಅಂಶಗಳಾಗಿವೆ. ವೇಗ ಮತ್ತು ನಿರ್ಲಕ್ಷö್ಯತನದಿಂದ ವಾಹನ ಚಾಲನೆ ಮಾಡುವುದು ಮತ್ತು ಹೆಚ್ಚಿನ ಚಾಲಕರು ಪಾನಮತ್ತರಾಗಿ ವಾಹನಗಳನ್ನು ಚಲಾಯಿಸುವುದು ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಶೈಲೇಂದ್ರಕುಮಾರ್ ಅಭಿಪ್ರಾಯಿಸಿದ್ದಾರೆ.
ಸರ್ಕಾರದ ಹಳೆಯ ಮಾರ್ಗಸೂಚಿಯಂತೆ ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳ ಅಕ್ಕ-ಪಕ್ಕದಲ್ಲಿ ರಸ್ತೆ ಮಧ್ಯಭಾಗದಿಂದ ೪೦ಮೀಟರ್ ಮತ್ತು ೨೫ ಮೀಟರ್ ಅಂತರಗಳಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ ಎನ್ನುವ ಸುತ್ತೋಲೆ ಇದ್ದರೂ, ಅದನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಟ್ಟಡಗಳನ್ನು ತೆರವು ಮಾಡಿಸಲು ಸಂಬAಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳದಿರುವುದೇ ಈ ಎಲ್ಲ ಅವಾಂತರಗಳಿಗೆ ಕಾರಣ. ಇದಕ್ಕೆ ಸಂಬAದಿಸಿದAತೆ ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳು ಗಮನಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಜೊತೆಗೆ ಕುಶಾಲನಗರ ಪಟ್ಟಣದಲ್ಲಿ ಸಮರ್ಪಕ ಸಂಚಾರಿ ವ್ಯವಸ್ಥೆ ಕಲ್ಪಿಸಲು ಪಟ್ಟಣದ ಸುತ್ತ ವರ್ತುಲ ರಸ್ತೆಯ ಅಗತ್ಯವಿದೆ ಎಂದು ಸ್ಥಳೀಯ
(ಮೊದಲ ಪುಟದಿಂದ) ಉದ್ಯಮಿ ಅಶೋಕ್ ತಿಳಿಸಿದ್ದಾರೆ. ಹೆದ್ದಾರಿ ಬದಿಯ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಈಗಾಗಲೇ ಕರ್ನಾಟಕ ಸರ್ಕಾರದ ಸಚಿವಾಲಯ ಸೇರಿದಂತೆ ರಾಜ್ಯ ಉಚ್ಚ ನ್ಯಾಯಾಲಯದಿಂದ ಕೂಡÀ ಆದೇಶ ಹೊರಬಿದ್ದಿದೆ.
ಮಡಿಕೇರಿಯಿಂದ ಕುಶಾಲನಗರ ತನಕ ಸಾಗುವ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಅನೇಕ ನಿಯಮ ಬಾಹಿರ ವ್ಯಾಪಾರಿ ಕೇಂದ್ರಗಳು ತಲೆ ಎತ್ತಿದ್ದು ಗುಡ್ಡೆಹೊಸೂರು ಮತ್ತು ಬೋಯಿಕೇರಿ ಬಳಿ ರಸ್ತೆಯನ್ನು ಒತ್ತುವರಿ ಮಾಡಿ ಕಟ್ಟಡ ಕಟ್ಟುತ್ತಿರುವ ೨ ಪ್ರಕರಣಗಳು ಕಂಡು ಬಂದಿವೆ ಎಂದು ರಾಷ್ಟಿçÃಯ ಹೆದ್ದಾರಿ ನಿಗಮದ ಅಧಿಕಾರಿ ಸುಂದರೇಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು ಈ ಕಟ್ಟಡದ ಮಾಲೀಕರಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕೂಡ ಹೆದ್ದಾರಿ ಬದಿಯಲ್ಲಿ ಅಕ್ರಮ ಹಾಗೂ ನಿಯಮ ಬಾಹಿರವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಸಂಬAಧಿಸಿದ ಸ್ಥಳೀಯ ಆಡಳಿತದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಹೆದ್ದಾರಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಪೊದೆಗಳನ್ನು ತೆರವುಗೊಳಿಸುವ ಕೆಲಸ ನಡೆಯಬೇಕಾಗಿದೆ ಎನ್ನುವುದು ವಾಹನ ಚಾಲಕರ ಆಗ್ರಹವಾಗಿದೆ.
ಜಿಲ್ಲಾ ರಸ್ತೆಗಳ ಅಕ್ಕಪಕ್ಕದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಲೋಕೋಪಯೋಗಿ ಇಲಾಖೆ ಸೋಮವಾರಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಕುಮಾರ್ ತಿಳಿಸಿದ್ದು, ಈ ಬಗ್ಗೆ ಈಗಾಗಲೇ ಸರ್ಕಾರದಿಂದ ಹೆದ್ದಾರಿ ರಸ್ತೆಗಳ ಇಕ್ಕೆಲಗಳಲ್ಲಿ ಕಟ್ಟಡ ನಿಯಂತ್ರಣ ರೇಖೆಗಳನ್ನು ಗುರುತಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸುತ್ತೋಲೆಯಂತೆ ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆಯ ಭೂಗಡಿಯ ಅಂಚಿನಿAದ ಕಟ್ಟಡ ರೇಖೆಯ ಅಂತರಗ್ರಾಮ ಪಂಚಾಯಿತಿ, ಟೌನ್ ಪಂಚಾಯಿತಿ ಪರಿಮಿತಿಯಲ್ಲಿ ೬ ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕಲ್ಪಿಸಿ, ಸರ್ಕಾರ ಜೂನ್ ೩೦. ೨೦೨೨ ರಲ್ಲಿ ಸುತ್ತೋಲೆ ಹೊರಡಿಸಿದೆ. ರಾಷ್ಟಿçÃಯ, ರಾಜ್ಯ ಹೆದ್ದಾರಿಯ ಹೊರ ವರ್ತುಲ ಪರಿಮಿತಿಯಲ್ಲಿ ರಸ್ತೆ ಮಧ್ಯಭಾಗದಿಂದ ನಿಗದಿಪಡಿಸಿದ ೪೦ ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣ ಮಾಡಬಹುದು, ಜಿಲ್ಲಾ ರಸ್ತೆಗಳ ಮಧ್ಯಭಾಗದಿಂದ ೨೫ ಮೀಟರ್ ಪರಿಮಿತಿ ನಿಗದಿಪಡಿಸಲಾಗಿದೆ. ಟೌನ್ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪರಿಮಿತಿಯಿಂದ ೫ ಕಿ.ಮೀಟರ್ ದೂರದ ತನಕ, ೧೨ ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತುತ ಸುತ್ತೋಲೆಯಲ್ಲಿ ಅನುಮತಿ ಕಲ್ಪಿಸಿದೆ.
ಈ ಎಲ್ಲಾ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಷ್ಟಿçÃಯ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ ಕಟ್ಟಡ ರೇಖೆಯನ್ನು ಗುರುತಿಸಿ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ನೀಡುವ ಮೂಲಕ ಸಮರ್ಪಕ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಿದಲ್ಲಿ ಅಪಘಾತ ಮುಕ್ತ ಹೆದ್ದಾರಿಯಾಗಿ ಪರಿರ್ವತನೆಗೊಳಿಸಲು ಸಾಧ್ಯಎನ್ನುವುದು ವಾಹನ ಚಾಲಕರ ಆಶಾಭಾವನೆಯಾಗಿದೆ.