ಗೋಣಿಕೊಪ್ಪಲು, ಜು. ೨೪: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಕರೆಯೋಗಮ್ನ ಶ್ರೀಲಕ್ಷಿ÷್ಮ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಜಯಶ್ರೀ ಸಂಜೀವ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಗೋಣಿಕೊಪ್ಪಲು ಸಂಘದ ಕಚೇರಿಯಲ್ಲಿ ನಡೆದ ಕರೆಯೋಗಮ್ ಶ್ರೀಲಕ್ಷಿ÷್ಮ ಮಹಿಳಾ ವಿಭಾಗದ ಸಭೆಯಲ್ಲಿ ಅಧ್ಯಕ್ಷರಾಗಿ ಜಯಶ್ರೀ ಸಂಜೀವ್ ಹಾಗೂ ಉಪಾಧ್ಯಕ್ಷರಾಗಿ ವಿಮಲಾ ಶ್ರೀಧರನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಲಿನಿಶಾ ಉನ್ನಿಕೃಷ್ಣನ್, ಜಂಟಿ ಕಾರ್ಯದರ್ಶಿಯಾಗಿ ವಿನ್ಯಾ ವೇಣುಗೋಪಾಲ್, ಖಜಾಂಚಿಯಾಗಿ ಗೀತಾ ವಿಜಯಕುಮಾರ್, ಕಾರ್ಯಕಾರಿಣಿ ಮಂಡಳಿಯ ನಿರ್ದೇಶಕರಾಗಿ ಸರಳಾ ಮನಿಲಾಲ್, ನಿಶಾ ಚಂದ್ರನ್, ಜಯಶ್ರೀ ಸುರೇಶ್, ಕಾರ್ತಿಯಾಯಿನಿ ಭಾಸ್ಕರನ್, ರಶ್ಮಿ ರಾಜಾ, ಲೀಲಾಮಣಿ ವಿಜಯಕುಮಾರ್, ಲೀಲಾ ಲೋಹಿತಕ್ಷನ್, ಜಾನಕಿಯಮ್ಮ, ಜ್ಯೋತಿ ಮೋಹನ್, ಶೈಲಜಾ ಪ್ರೇಮ ಚಂದ್ರನ್ ಹಾಗೂ ಶೀಜಾ ಪ್ರದೀಪನ್ ಆಯ್ಕೆಯಾಗಿದ್ದರು.