ಮಡಿಕೇರಿ, ಜು. ೨೩: ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ‘ವಿಷನ್ ಫಾರ್ ಇಂಡಿಯಾ ೨೦೪೭’ ಎನ್ನುವ ವಿಷಯದ ಬಗ್ಗೆ ಪತ್ರ ಬರೆಯುವುದು.ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅಂಚೆ ಕಚೇರಿಯಲ್ಲಿ ದೊರೆಯುವ ಇನ್ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್ವಲಪ್ ಉಪಯೋಗಿಸಬೇಕು. ಇನ್ಲ್ಯಾಂಡ್ ಲೆಟರ್ ಕಾರ್ಡ್ ಉಪಯೋಗಿಸು ವವರು ೫೦೦ ಪದಗಳನ್ನು ಮತ್ತು ಎನ್ವಲಪ್ ಉಪಯೋಗಿಸುವವರು ೧ ಸಾವಿರ ಪದಗಳನ್ನು. ಎ೪ ಶೀಟ್ನಲ್ಲಿ ಬರೆದು ಎನ್ವಲಪ್ ಜೊತೆ ಕಳುಹಿಸಬೇಕು.
ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು. ಸ್ಪರ್ಧೆಗೆ ಉಪಯೋಗಿಸಿದ ಐಎಲ್ಸಿ/ ಎನ್ವಲಪ್ ಅಟ್ ದಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು-ಮಡಿಕೇರಿ, ಜು. ೨೩: ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ‘ವಿಷನ್ ಫಾರ್ ಇಂಡಿಯಾ ೨೦೪೭’ ಎನ್ನುವ ವಿಷಯದ ಬಗ್ಗೆ ಪತ್ರ ಬರೆಯುವುದು.
ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅಂಚೆ ಕಚೇರಿಯಲ್ಲಿ ದೊರೆಯುವ ಇನ್ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್ವಲಪ್ ಉಪಯೋಗಿಸಬೇಕು. ಇನ್ಲ್ಯಾಂಡ್ ಲೆಟರ್ ಕಾರ್ಡ್ ಉಪಯೋಗಿಸು ವವರು ೫೦೦ ಪದಗಳನ್ನು ಮತ್ತು ಎನ್ವಲಪ್ ಉಪಯೋಗಿಸುವವರು ೧ ಸಾವಿರ ಪದಗಳನ್ನು. ಎ೪ ಶೀಟ್ನಲ್ಲಿ ಬರೆದು ಎನ್ವಲಪ್ ಜೊತೆ ಕಳುಹಿಸಬೇಕು.
ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು. ಸ್ಪರ್ಧೆಗೆ ಉಪಯೋಗಿಸಿದ ಐಎಲ್ಸಿ/ ಎನ್ವಲಪ್ ಅಟ್ ದಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು-೫೬೦೦೦೧ ಪತ್ರ ಬರೆಯುವ ಸ್ಪರ್ಧೆ' ಎಂದು ವಿಳಾಸ ಬರೆದು ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ನಂತರ ಇನ್ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್ವಲಪ್ನ್ನು ಹತ್ತಿರದ ಅಂಚೆ ಕಚೇರಿಗೆ ತಲುಪಿಸಬೇಕು. ಕಚೇರಿಗೆ ಪತ್ರವನ್ನು ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿದೆ.
ಕರ್ನಾಟಕ ವೃತ್ತ ಮಟ್ಟದ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಮೊದಲ ಬಹುಮಾನ ರೂ. ೨೫ ಸಾವಿರ, ದ್ವಿತೀಯ ಬಹುಮಾನ ರೂ.೧೦ ಸಾವಿರ, ತೃತೀಯ ಬಹುಮಾನ ರೂ.೫ ಸಾವಿರಗಳು. ಹಾಗೂ ರಾಷ್ಟಿçÃಯ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.೫೦ ಸಾವಿರ, ದ್ವೀತಿಯ ಬಹುಮಾನ ರೂ.೨೫ ಸಾವಿರ ಹಾಗೂ ತೃತೀಯ ಬಹುಮಾನ ರೂ.೫ ಸಾವಿರ ನಗದು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಯಾವುದೇ ವಯೋಮಾನದವರು ಭಾಗವಹಿಸಲು ಅವಕಾಶವಿದೆ ಎಂದು ಅಂಚೆ ವಿಭಾಗದ ಮುಖ್ಯ ಅಧೀಕ್ಷಕರು ತಿಳಿಸಿದ್ದಾರೆ.