ಚೆಯ್ಯಂಡಾಣೆ, ಜು. ೨೩: ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ವತಿಯಿಂದ ಎರಡನೇ ವರ್ಷದ ಹಿಂದೂ ಬಾಂಧವರಿಗೆ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟವು ಅರ್ವತ್ತೊಕ್ಲುವಿನ ತುಮುತ್ತಜ್ಜೀರ ಕುಟುಂಬಸ್ಥರ ಗದ್ದೆಯಲ್ಲಿ ಜರುಗಿತು.

ಕ್ರೀಡಾಕೂಟವನ್ನು ಕ್ಲಬ್ ಅಧ್ಯಕ್ಷ ಅರವಿಂದ್ ಉದ್ಘಾಟಿಸಿದರು. ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಓಟದ ಸ್ಪರ್ಧೆ ನಡೆಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಗ್ರೀನ್ಸ್ ಕಟ್ಟೆಮಾಡು ತಂಡ ಪ್ರಥಮ ಸ್ಥಾನ ಪಡೆದರೆ ಮೂರ್ನಾಡುವಿನ ನೆವಿರೈಡರ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಗ್ಗೋಡು ತಂಡ ಪ್ರಥಮ, ಹೆಬ್ಬೆಟ್ಟಗೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಾಲಿಬಾಲ್ ಪಂದ್ಯಾಟದಲ್ಲಿ ವೈಲ್ಡ್ ಮಾಸ್ಟರ್ ಕೊಡಗು ತಂಡ ಪ್ರಥಮ, ಬ್ಲಾಕ್ ಪ್ಯಾಂಥರ್ಸ್ ಸಿದ್ದಾಪುರ ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.

ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಾಗಶ್ರೀ ಸುಳ್ಯ ತಂಡ ಪ್ರಥಮ, ಪ್ಲಾಂಟರ್ಸ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡವರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಯಿತು.