ಚೆಟ್ಟಳ್ಳಿ, ಜು. ೨೩: ಕೊಡವರನ್ನು ಹಾಗೂ ದೇವತೆಯನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಅಮಾಯಕ ಯುವಕನೊಬ್ಬನ ಮೇಲೆ ಸುಳ್ಳು ಆರೋಪ ಮಾಡಿ ತೇಜೋವಧೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ತಿಳಿಸಿದೆ. ಇನ್‌ಸ್ಟಾಗ್ರಾಂ ನಕಲಿ ಖಾತೆ ಬಳಸಿ ಕೊಡವರ ದೇವತೆಯ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಸಂದೇಶ ಕಳುಹಿಸಿದ ಆರೋಪವನ್ನು ಸಿದ್ದಾಪುರದ ಅಮಾಯಕ ಯುವಕನೊಬ್ಬನ ಮೇಲೆ ಹಾಕಿ ಆತನಿಗೆ ಉಗ್ರಪಟ್ಟ ಕಟ್ಟಲೂ ಕೂಡ ಹಲವರು ಮುಂದಾದರು. ಈ ಸಂಬAಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.