ಚೆಟ್ಟಳ್ಳಿ, ಜು. ೨೩: ನಿರಂತರವಾಗಿ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ ಬದಿಯ ತಡೆಗೋಡೆ ಹರೀಶ್ ಅಯ್ಯಪ್ಪ ಅವರ ಮನೆಗೆ ಬಿದ್ದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ. ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪುತ್ತರಿರ ಐನ್‌ಮನೆಗೆ ತೆರಳುವ ರಸ್ತೆಯ ಬದಿಯಲ್ಲಿ ನಿರ್ಮಿಸಿದ ತಡೆಗೋಡೆ ಮಳೆಗೆ ಬಿರುಕುಗೊಂಡು ವಾಹನ ಸಂಚಾರದಿAದ ಹಾನಿಗಳಗಾಗಿತ್ತು. ಕಳೆದ ರಾತ್ರಿ ಲಾರಿ ಸಂಚರಿಸುತ್ತಿದAತೆ ಅಪಾಯದ ಅಂಚಿನಲ್ಲಿದ್ದ ತಡೆಗೋಡೆ ಹರೀಶ್ ಅಯ್ಯಪ್ಪ ಅವರ ಮನೆಗೆ ಕುಸಿದು ಹಾನಿ ಸಂಭವಿಸಿದೆ. ಇನ್ನುಳಿದ ತಡೆಗೋಡೆ ಬೀಳುವ ಹಂತದಲ್ಲಿದೆ. ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಮುಳ್ಳಂಡ ಅಂಜನ್ ಸುರೇಶ ಹಾಗೂ ಬಿಜೆಪಿಯ ಚೆಟ್ಟಳ್ಳಿ ವಾರ್ಡ್ ಅಧ್ಯಕ್ಷ ಪುತ್ತರಿರ ಶಿವು ನಂಜಪ್ಪ ಪರಿಶೀಲಿಸಿದ್ದು, ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.