ಮಡಿಕೇರಿ, ಜು. ೨೨: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರವರ್ಗ ೩ಬಿ ಅಡಿಯಲ್ಲಿ ಬರುವ ಮರಾತ, ಮರಾಠ, ಅರೆ ಕ್ಷತ್ರಿ, ಅರೆ ಮರಾಠ, ರ‍್ಯ ಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾತ/ ಕ್ಷತ್ರಿಯ ಮರಾಠ (ಎಫ್) ಕುಳವಾಡಿ ಜನರ ಆರ್ಥಿಕ ಅಭಿವೃದ್ಧಿಗಾಗಿ ೨೦೨೨-೨೩ ರಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ (ಸ್ವಯಂ ಉದ್ಯೋಗ ನೇರಸಾಲ ಮತು ಸಹಾಯಧನ ಯೋಜನೆ): ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗೆ ಅನುಸಾರ ಸೌಲಭ್ಯ ಒದಗಿಸಲಾಗುವುದು. ಅರ್ಜಿದಾರರ ವಯಸ್ಸು ೧೮ ರಿಂದ ೫೫ ವರ್ಷಗಳ ಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ಅದಾಯ ಗ್ರಾಮೀಣ ಪ್ರದೇಶದವರಿಗೆ ರೂ. ೯೮ ಸಾವಿರ, ಪಟ್ಟಣ ಪ್ರದೇಶದವರಿಗೆ ರೂ. ೧.೨೦ ಸಾವಿರಗಳ ಒಳಗಿರಬೇಕು. ಅರ್ಜಿದಾರರ ಆಧಾರ್ ಸಂಖ್ಯೆಯು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆಯೊಂದಿಗೆ ಸೀಡ್ ಆಗಿರಬೇಕು. ಘಟಕ ವೆಚ್ಚ ರೂ. ೫೦ ಸಾವಿರವರೆಗೆ ಶೇ. ೨೦ ರಷ್ಟು ಸಹಾಯಧನ (ಗರಿಷ್ಠ ರೂ.೧೦ ಸಾವಿರ) ಶೇ. ೮೦ ರಷ್ಟು (ರೂ. ೪೦ ಸಾವಿರ) ಸಾಲವನ್ನು ಶೇ.೪ ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ ರೂ. ೫೦ ಸಾವಿರದಿಂದ ರೂ. ೧ ಲಕ್ಷದವರೆಗೆ, ಶೇ. ೨೦ ರಷ್ಟು ಸಹಾಯಧನ(ಗರಿಷ್ಠ ರೂ. ೨೦ ಸಾವಿರ) ಶೇ. ೮೦ ರಷ್ಟು (ರೂ. ೮೦ ಸಾವಿರಗಳು) ಸಾಲವನ್ನು ಶೇ. ೪ರ ಬಡ್ಡಿ ದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ ರೂ.೧ ಲಕ್ಷ ದಿಂದ ರೂ. ೨ ಲಕ್ಷಗಳವರೆಗೆ ಶೇ. ೧೫ ರಷ್ಟು ಸಹಾಯಧನ (ಗರಿಷ್ಠ ೩೦ ಸಾವಿರ) ಶೇ. ೮೫ ರಷ್ಟು ಸಾಲವನ್ನು ಶೇ. ೪ ರ ಬಡ್ಡಿ ದರದಲ್ಲಿ ಒದಗಿಸಲಾಗುವುದು. ಈ ಯೋಜನೆಗೆ ಆನ್‌ಲೈನ್ ಮೂಲಕ “ಸುವಿಧಾ” (hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ) ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವುದು.

ಸ್ವಾತಂತ್ರö್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ: ಮರಾಠ ಸಮುದಾಯದ ಯುವ ಜನತೆಯನ್ನು ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗಮುಖಿ ಗಳನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ಐಟಿಐಎಸ್, ಜಿಟಿಟಿಸಿ, ಕೆಜಿಟಿಟಿಐ ಮತ್ತಿತರ ಅಲ್ಪಾವಧಿ ಕೋರ್ಸ್ಗಳ ಮೂಲಕ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಕೌಶಲ್ಯ ಕರ್ನಾಟಕ ತಂತ್ರಾAಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರ ವಯಸ್ಸು ಕನಿಷ್ಟ ೧೮ ವರ್ಷಗಳು ಹಾಗೂ ಗರಿಷ್ಠ ೨೫ ವರ್ಷಗಳ ಮಿತಿಯೊಳಗಿರಬೇಕು. ಅರ್ಜಿ ಸಲ್ಲಿಸುವಾಗ ಸಂಬAಧಪಟ್ಟ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ಈ ಸೌಲಭ್ಯವನ್ನು ಪಡೆಯುವ ಫಲಾನುಭವಿಯ ವಾರ್ಷಿಕ ವರಮಾನ ರೂ. ೮ ಲಕ್ಷಗಳ ಒಳಗಿರಬೇಕು (ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು).

ಯೋಜನೆಗೆ ಆನ್‌ಲೈನ್ ಮೂಲಕ “ಕೌಶಲ್ಯ ಕರ್ನಾಟಕ ಪೋರ್ಟಲ್” hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ತಂತ್ರಾAಶದ ಮೂಲಕ ಅರ್ಜಿಗಳನ್ನು ಸಲ್ಲಿಸುವುದು. ಅರ್ಜಿದಾರರ ಆಧಾರ್ ಸಂಖ್ಯೆಯು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆಯೊಂದಿಗೆ ಸೀಡ್ ಆಗಿರಬೇಕು.

ಈ ಯೋಜನೆಗಳಿಗೆ ಆಗಸ್ಟ್ ೧೯ ರೊಳಗೆ ಆನ್‌ಲೈನ್‌ನಲ್ಲಿ ತಂತ್ರಾAಶಗಳ ಮುಖಾಂತರ ಅರ್ಜಿಗಳನ್ನು ಸಲ್ಲಿಸುವುದು. ಕಡೇ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ಅಥವಾ ದೂರವಾಣಿ ಸಂಖ್ಯೆ: ೦೮೨೭೨-೨೨೧೬೫೬ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಹಾದೇವಿ ತಿಳಿಸಿದ್ದಾರೆ.

ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ

ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ-೩ಎ ನಲ್ಲಿ ನಮೂದಾಗಿರುವ (ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಗಂಗಡ್‌ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಹಳ್ಳಿಕಾರ್, ಕುಂಚೆಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾರೆಡ್ಡಿ, ಗೌಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ, ಉತ್ತಮ ಕೊಳಗ) ಒಕ್ಕಲಿಗ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ ೨೦೨೨-೨೩ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಸಾಲ ಯೋಜನೆ: ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗೆ ಅನುಸಾರ ಸೌಲಭ್ಯ ಒದಗಿಸಲಾಗುತ್ತದೆ. ಅರ್ಜಿದಾರರ ವಯಸ್ಸು ೧೮ ರಿಂದ ೫೫ ವರ್ಷಗಳ ಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ಅದಾಯ ಗ್ರಾಮೀಣ ಪ್ರದೇಶದವರಿಗೆ ರೂ. ೯೮ ಸಾವಿರ, ಪಟ್ಟಣ ಪ್ರದೇಶದವರಿಗೆ ರೂ. ೧.೨೦ ಲಕ್ಷಗಳ ಒಳಗಿರಬೇಕು. ಅರ್ಜಿದಾರರ ಆಧಾರ್ ಸಂಖ್ಯೆಯು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆಯೊಂದಿಗೆ ಸೀಡ್ ಆಗಿರಬೇಕು.

ಘಟಕ ವೆಚ್ಚ ರೂ. ೫೦ ಸಾವಿರ ವರೆಗೆ ಶೇ. ೨೦ ರಷ್ಟು ಸಹಾಯಧನ (ಗರಿಷ್ಠ ರೂ.೧೦ ಸಾವಿರ) ಶೇ. ೮೦ ರಷ್ಟು (ರೂ. ೪೦ ಸಾವಿರಗಳು) ಸಾಲವನ್ನು ಶೇ.೪ ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ ರೂ. ೫೦ ಸಾವಿರದಿಂದ ೧ ಲಕ್ಷದವರೆಗೆ ಶೇ.೨೦ ರಷ್ಟು ಸಹಾಯಧನ (ಗರಿಷ್ಠ ರೂ. ೨೦ ಸಾವಿರ) ಶೇ. ೮೦ ರಷ್ಟು (ರೂ. ೮೦ ಸಾವಿರಗಳು) ಸಾಲವನ್ನು ಶೇ.೪ ರ ಬಡ್ಡಿ ದರದಲ್ಲಿ ಒದಗಿಸಲಾಗುವುದು.

ಘಟಕ ವೆಚ್ಚ ರೂ. ೧ ಲಕ್ಷದಿಂದ ರೂ. ೨ ಲಕ್ಷಗಳವರೆಗೆ ಶೇ. ೧೫ ರಷ್ಟು ಸಹಾಯಧನ (ಗರಿಷ್ಠ ೩೦ ಸಾವಿರ) ಶೇ. ೮೫ ರಷ್ಟು ಸಾಲವನ್ನು ಶೇ.೪ ರ ಬಡ್ಡಿ ದರದಲ್ಲಿ ಒದಗಿಸಲಾಗುವುದು. ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ/ಸರಕು/ಸಾಗಾಣಿಕೆ ವಾಹನ ಕೊಳ್ಳಲು ಸಹಾಯಧನ ಯೋಜನೆ; ಟೂರಿಸ್ಟ್ ಟ್ಯಾಕ್ಸಿ ಕೊಳ್ಳಲು ಬ್ಯಾಂಕುಗಳು ಮಂಜೂರು ಮಾಡುವ ಸಾಲದ ಮೊತ್ತದಲ್ಲಿ ಶೇ: ೫೦ ರಷ್ಟು ಗರಿಷ್ಠ ರೂ.೩ ಲಕ್ಷದಂತೆ ನಿಗಮದಿಂದ ಸಹಾಯಧನ, ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲದ ಮೊತ್ತದ್ದಾಗಿರುತ್ತದೆ. ಸಾಲದ ಅಸಲು ಮತ್ತು ಬಡ್ಡಿಯನ್ನು ಬ್ಯಾಂಕ್ ನಿಗದಿಪಡಿಸಿದ ಕಂತುಗಳನ್ವಯ ಬ್ಯಾಂಕ್‌ಗೆ ಪಾವತಿಸಬೇಕು.

ಗಂಗಾ ಕಲ್ಯಾಣ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಕನಿಷ್ಠ ೦೧ ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ಘಟಕ ವೆಚ್ಚ ರೂ. ೨ ಲಕ್ಷಗಳಲ್ಲಿ ರೂ. ೧.೫೦ ಲಕ್ಷ ಸಹಾಯಧನ ಉಳಿಕೆ ಮೊತ್ತ ರೂ. ೫೦ ಸಾವಿರ ಶೇ.೪ ಬಡ್ಡಿ ದರದಲ್ಲಿ ಸಾಲ. ಪ್ರತೀ ಕೊಳವೆ ಬಾವಿಗೆ ವಿದ್ಯುದ್ದೀಕರಣಕ್ಕೆ ರೂ. ೫೦ ಸಾವಿರಗಳಂತೆ ವಿದ್ಯುತ್ ಸರಬರಾಜು ಕಂಪೆನಿಗೆ ಭರಿಸಲಾಗುವುದು.

ಸಾಮೂಹಿಕ ನೀರಾವರಿ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಕನಿಷ್ಟ ೩ ಜನ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ ೮-೧೫ ಎಕರೆ ಜಮೀನಿಗೆ ರೂ. ೪ ಲಕ್ಷ ವೆಚ್ಚದಲ್ಲಿ ೨ ಕೊಳವೆ ಬಾವಿ ಮತ್ತು ೧೫ ಎಕರೆಗಿಂತ ಹೆಚ್ಚಿನ ಜಮೀನಿಗೆ ರೂ. ೬ ಲಕ್ಷಗಳ ವೆಚದಲ್ಲಿ ೩ ಕೊಳವೆ ಬಾವಿಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಪ್ರತಿ ಕೊಳವೆ ಬಾವಿಗೆ ವಿದ್ಯುದ್ದೀಕರಣಕ್ಕೆ ರೂ. ೫೦ ಸಾವಿರಗಳಂತೆ ಘಟಕ ವೆಚ್ಚದಲ್ಲಿ ವಿದ್ಯುತ್ ಸರಬರಾಜು ಕಂಪೆನಿಗೆ ಭರಿಸಲಾಗುವುದು.

ಸ್ವಾತಂತ್ರö್ಯ ಅಮೃತ ಮಹೋತ್ಸವ ಮುನ್ನಡೆ ಯೊಜನೆ: ಒಕ್ಕಲಿಗ ಸಮುದಾಯದ ಯುವ ಜನತೆಯನ್ನು ಕೌಶಲ್ಯ ಅಭಿವೃದ್ಧಿ ಪಡಿಸಿ ಉದ್ಯೋಗಮುಖಿಗಳನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ಐಟಿಐಎಸ್, ಜಿಟಿಟಿಸಿ, ಕೆಜಿಟಿಟಿಐ ಮತ್ತಿತರ ಅಲ್ಪಾವಧಿ ಕೋರ್ಸ್ಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಆನ್‌ಲೈನ್‌ನಲ್ಲಿ ಕೌಶಲ್ಯ ಕರ್ನಾಟಕ ತಂತ್ರಾAಶ hಣಣಠಿs://ತಿತಿತಿ.ಞಚಿushಚಿಟಞಚಿಡಿ.ಛಿom ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಈ ಸೌಲಭ್ಯ ಪಡೆಯಲು ಇಚ್ಚಿಸುವ ಒಕ್ಕಲಿಗ ಸಮುದಾಯದ ಫಲಾಪೇಕ್ಷಿಗಳು ಯೋಜನೆಗಳ ಷರತ್ತು ಮತ್ತು ನಿಬಂಧನೆಗಳನ್ನು ಹಾಗೂ ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ hಣಣಠಿs://ಞvಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿನಲ್ಲಿ ವೀಕ್ಷಿಸಬಹುದು. ಅರ್ಜಿಯನ್ನು ನಿಗಮದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿಗೆ ಆಗಸ್ಟ್ ೧೮ ರೊಳಗೆ ಸಲ್ಲಿಸುವುದು. ಕಡೇ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ದೂ. ೦೮೨೭೨-೨೨೧೬೫೬ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಹಾದೇವಿ ತಿಳಿಸಿದ್ದಾರೆ.