ಪೊನ್ನಂಪೇಟೆ, ಜು. ೨೨: ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆ ಗ್ರಾಮದ ಬ್ಯಾಂಕ್ ಆಫ್ ಬರೋಡ ಶಾಖೆ ವತಿಯಿಂದ ಸುಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಅಶೋಕ್ ಕುಮಾರ್, ಮುಖ್ಯ ಶಿಕ್ಷಕ ಎನ್.ಎಂ. ಕೀರ್ತಿ, ಎಸ್‌ಡಿಎಂಸಿ ಅಧ್ಯಕ್ಷೆ ಹೆಚ್.ಸಿ. ಗೀತಾ, ಬ್ಯಾಂಕ್ ಸಿಬ್ಬಂದಿ ಸದಾಶಿವ ಮೂರ್ತಿ, ವೆಂಕಟೇಶ್, ಉಷಾ, ಅತಿಥಿ ಶಿಕ್ಷಕಿ ಟಿ.ಕೆ. ಮಾಲತಿ, ಅಕ್ಷರ ದಾಸೋಹ ಸಿಬ್ಬಂದಿ ಕುಸುಮ, ಸುಮಾ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.