ಗೋಣಿಕೊಪ್ಪಲು, ಜು. ೨೨: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಉಪಯೋಗಿಸುವ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕವನ್ನು ಉಚಿತವಾಗಿ ನೀಡುವುದಾಗಿ ತೀರ್ಮಾನಿಸಿ ಘೋಷಿಸಿದ ಆದೇಶವನ್ನು ಬದಲಿಸಿ ೧.೭.೨೦೨೨ ರಿಂದ ಅನ್ವಯವಾಗುವಂತೆ ಹಲವಾರು ಷರತ್ತುಗಳನ್ನೊಳ ಗೊಂಡAತೆ ಆದೇಶ ನೀಡಿರುವುದು ಕೊಡಗಿನ ಕಾಫಿ ಬೆಳೆಗಾರರಿಗೆ ಮಾಡಿರುವ ಅನ್ಯಾಯವೆಂದು ಕರ್ನಾಟಕ ರೈತ ಸಂಘ ಪೊನ್ನಂಪೇಟೆ ತಾಲೂಕು ಘಟಕ ಆರೋಪಿಸಿದೆ.

ಗೋಣಿಕೊಪ್ಪಲು, ಜು. ೨೨: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಉಪಯೋಗಿಸುವ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕವನ್ನು ಉಚಿತವಾಗಿ ನೀಡುವುದಾಗಿ ತೀರ್ಮಾನಿಸಿ ಘೋಷಿಸಿದ ಆದೇಶವನ್ನು ಬದಲಿಸಿ ೧.೭.೨೦೨೨ ರಿಂದ ಅನ್ವಯವಾಗುವಂತೆ ಹಲವಾರು ಷರತ್ತುಗಳನ್ನೊಳ ಗೊಂಡAತೆ ಆದೇಶ ನೀಡಿರುವುದು ಕೊಡಗಿನ ಕಾಫಿ ಬೆಳೆಗಾರರಿಗೆ ಮಾಡಿರುವ ಅನ್ಯಾಯವೆಂದು ಕರ್ನಾಟಕ ರೈತ ಸಂಘ ಪೊನ್ನಂಪೇಟೆ ತಾಲೂಕು ಘಟಕ ಆರೋಪಿಸಿದೆ.

ಆದೇಶವನ್ನು ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತು.

ಸರಕಾರ ತೋರಿರುವ ಮಲತಾಯಿ ಧೋರಣೆಯನ್ನು ಸಂಘಟನೆ ಖಂಡಿಸಿದೆ. ಸರಕಾರ ನೀಡಿರುವ ಷರತ್ತುಗಳು ಮತ್ತು ನಿಯಮಾವಳಿಗಳು ಅವೈಜ್ಞಾನಿಕವಾಗಿ ಕೂಡಿದ್ದು, ಇದರಲ್ಲಿ ಕೊಡಗಿನ ಕಾಫಿ ಬೆಳೆಗಾರರಿಗೆ ಯಾವುದೇ ಅನೂಕೂಲವಾಗುವಂತೆ ಕಂಡು ಬರುತ್ತಿಲ್ಲ. ಈ ಹಿಂದೆ ಬಾಕಿ ಉಳಿಸಿಕೊಂಡ ಶುಲ್ಕದ ಬಗ್ಗೆ ಈ ಆದೇಶದ ಪ್ರತಿಯಲ್ಲಿ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಆದೇಶದಲ್ಲಿ ಸೂಚಿಸಿದಂತೆ ೧.೭.೨೦೨೨ ರಿಂದ ಬಳಕೆಯಾಗುವ ವಿದ್ಯುತ್ ಶುಲ್ಕವನ್ನು ಬಳಕೆದಾರರು ಪಾವತಿಸಿ ಈ ಮೊತ್ತವನ್ನು

(ಮೊದಲ ಪುಟದಿಂದ) ಸರಕಾರವು ಡಿ.ಬಿ.ಟಿ. ಮೂಲಕ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುವುದು ಎಂಬುದಾಗಿ ತಿಳಿಸಿದೆ. ಇದರಲ್ಲಿ ಕಂಪೆನಿ ವಿಧಿಸುವ ವಿದ್ಯುತ್ ತೆರಿಗೆ ಹೊರತುಪಡೆಸಿ ಎಷ್ಟು ಮೊತ್ತ ಸರಕಾರದಿಂದ ರೈತರ ಖಾತೆಗೆ ಪಾವತಿಸುವ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ ಎಂದು ರೈತ ಸಂಘದ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್ ಸಭೆಯಲ್ಲಿ ತಿಳಿಸಿದರು.

ಈಗಾಗಲೇ ಕ.ರಾ.ರೈ. ಸಂಘವು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಪರವಾಗಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಹಲವಾರು ವರ್ಷಗಳಿಂದ ನಿರಂತರ ಹೋರಾಟವನ್ನು ನಡೆಸುತ್ತಾ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದಾಗಿ ಭೇಟಿ ನೀಡಿ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಮಾನ್ಯತೆ ನೀಡಿದ ಮುಖ್ಯಮಂತ್ರಿಗಳು ಮರು ದಿನವೇ ಸದನದ ಶೂನ್ಯ ವೇಳೆಯಲ್ಲಿ ಕೊಡಗಿನ ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದರು. ಆದರೆ ಮುಖ್ಯಮಂತ್ರಿಗಳ ಮಾತಿಗೂ ಕಿಂಚಿತ್ತು ಬೆಲೆಯಿಲ್ಲದಂತಾಗಿರುವುದು ಶೋಚನೀಯ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಬೆಳೆಗಾರರು ಆರ್ಥಿಕವಾಗಿ ತೊಂದರೆಗೀಡಾಗಿರುವ ವಿಷಯ ಸರಕಾರಕ್ಕೆ ತಿಳಿದಿದೆ. ವರ್ಷದಲ್ಲಿ ಕೇವಲ ೩ ತಿಂಗಳು ಬಳಸುವ ಐ.ಪಿ. ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಮೀನಾಮೇಷ ನಡೆಸುತ್ತಿರುವ ಸರಕಾರದ ಧೋರಣೆಯನ್ನು ಬೆಳೆಗಾರರು ಖಂಡಿಸಿದರು.

ಸರಕಾರದ ಈ ಮಲತಾಯಿ ಧೋರಣೆಯನ್ನು ರೈತ ಸಂಘ ಖಂಡಿಸಿ, ಕೂಡಲೇ ಸರಕಾರವು ಈ ಆದೇಶವನ್ನು ಹಿಂಪಡೆದು ಮರುಪರಿಶೀಲಿಸಿ ಈ ಹಿಂದೆ ಬಾಕಿ ಉಳಿಸಿಕೊಂಡ ಕಾಫಿ ಬೆಳೆಗಾರರ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಕೊಡಗು, ಹಾಸನ, ಚಿಕ್ಕಮಂಗಳೂರುವಿನ ಕಾಫಿ ಬೆಳೆಗಾರರ ಬೇಡಿಕೆಯಂತೆ ೧೦ ಹೆಚ್.ಪಿ.ವರೆಗಿನ ವಿದ್ಯುತ್ ಶುಲ್ಕವನ್ನು ಉಚಿತವಾಗಿ ನೀಡಲು ಆದೇಶಿಸಬೇಕೆಂದು ರೈತ ಸಂಘ ಆಗ್ರಹಿಸಿತು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕ.ರಾ.ರೈ. ಸಂಘದ ವತಿಯಿಂದ ರಾಜ್ಯಾದ್ಯಂತ ಹಾಗೂ ಜಿಲ್ಲಾವಾರು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸಭೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ತೀತರಮಾಡ ರಾಜ, ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.

ಸ್ಪಷ್ಟನೆ ಬೇಕು

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ|| ಸಣ್ಣುವಂಡ ಕಾವೇರಪ್ಪ ಅವರು ಈಗಿನ ಆದೇಶ ಜಿಲ್ಲೆಯವರಿಗೆ ನೇರವಾಗಿ ಪ್ರಯೋಜನಕ್ಕೆ ಬರುವಂತೆ ಕಂಡುಬರುತ್ತಿಲ್ಲ. ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೆಪಿಟಿಸಿಎಲ್ - ಸೆಸ್ಕ್ ನೀಡಬೇಕೆಂದು ಹೇಳಿದ್ದಾರೆ.