ಗೋಣಿಕೊಪ್ಪ, ಜು. ೨೨: ಜೀವನ ಗೆಲ್ಲಲು ಸಾಹಸ ಕ್ರೀಡೆಗಳು ಅತ್ಯವಶ್ಯ ಎಂದು ಕೂರ್ಗ್ ಅಡ್ವೆಂಚರ್ ಕ್ಲಬ್ ಸಂಸ್ಥಾಪಕ (ನಿ) ಲೆಫ್ಟಿನೆಂಟ್ ಕರ್ನಲ್ ಚೆಪ್ಪುಡೀರ ಎ. ತಮ್ಮಪ್ಪ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಅಡ್ವೆಂಚರ್ ಕ್ಲಬ್ ಆರಂಭಿಸಿದ ಹಿನ್ನೆಲೆ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ‘ಜನಭೇಟಿ’ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಸಂದರ್ಭ ಅವರು ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ಏಳು-ಬೀಳು ಸಾಮಾನ್ಯ. ಇದರಿಂದಾಗಿ ಜೀವನವನ್ನು ಗೆಲ್ಲಲು ಪ್ರತಿಯೊಬ್ಬರು ಸಾಹಸಮಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕಿದ್ದು, ಅಡ್ವೆಂಚರ್ ಕ್ಲಬ್ ಯುವ ಸಮೂಹವನ್ನು ಸಾಹಸಮಯ ಚಟುವಟಿಕೆಗಳಿಗೆ ಸೆಳೆಯುವಂತಹ ಕಾರ್ಯಕ್ರಮ ಆಯೋಜಿಸಬೇಕು. ಆಗ ಸ್ಥಾಪನೆಯ ಪೂರ್ವ ಉದ್ದೇಶ ಜೀವಂತಿಕೆ ಪಡೆದುಕೊಳ್ಳಲಿದೆ ಎಂದು ಸಲಹೆ ನೀಡಿದರು.

ಸಾಹಸ ಕ್ರೀಡೆಗಳನ್ನು ಆಯೋಜಿಸುವ ಉದ್ದೇಶದಿಂದ ಸ್ಥಾಪಿಸಿರುವ ಸಂಸ್ಥೆಗೆ ಉತ್ತಮ ನಾಯಕತ್ವದ ಹಾಗೂ ಹಣಕಾಸಿನ ತೊಂದರೆಗಳನ್ನು ನಿಭಾಯಿಸುವ ಅಗತ್ಯವಿದೆ. ಸಂಸ್ಥೆಯ ಆಡಳಿತ ಮಂಡಳಿಯ ವೈಯಕ್ತಿಕ ಆಸಕ್ತಿಯಿಂದ ಮಾತ್ರ ಇಂತಹ ಸಂಸ್ಥೆಗಳನ್ನು ನಡೆಸಬಹುದಾಗಿದೆ. ಇಂದಿನ ಯುವಪೀಳಿಗೆ ಸಾಹಸ ಕ್ರೀಡೆಗಳಿಂದ ದೂರ ಸರಿದಿದ್ದಾರೆ. ವ್ಯಾಪಾರ ಹಾಗೂ ನೌಕರಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಸೂಕ್ತ ಮಾರ್ಗದರ್ಶನದಿಂದ ಅವರನ್ನು ಮತ್ತೆ ಸಾಹಸ ಕ್ರೀಡೆಗಳ ಕಡೆಗೆ ಸೆಳೆಯಬಹುದಾಗಿದೆ. ಇದು ದೇಶಕ್ಕೆ ಉತ್ತಮ ನಾಯಕರನ್ನು ನೀಡಿದಂತಾಗಲಿದೆ ಎಂದರು.

ಚಟದಿಂದ ಹೊರಬರಲು ಸಾಹಸ ಕ್ರೀಡೆ: ಸೇನೆಯಲ್ಲಿದ್ದಾಗ ರಜೆಯಲ್ಲಿ ಗ್ರಾಮಕ್ಕೆ ಬರುವಾಗ ಸಾಕಷ್ಟು ಯುವ ಸಮೂಹ ಕೆಟ್ಟ ಚಟಗಳಿಗೆ ಒಗ್ಗಿಕೊಳ್ಳುತ್ತಿರುವುದು ಗಮನಕ್ಕೆ ಬಂತು. ಇವರ ಪರಿವರ್ತನೆ ದೃಷ್ಟಿಯಿಂದ ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸಲು ಅಡ್ವೆಂಚರ್ ಕ್ಲಬ್ ಸ್ಥಾಪಿಸುವ ಚಿಂತನೆ ಬಂತು. ೧೯೯೨ ರಲ್ಲಿ ಬಿಟ್ಟಂಗಾಲದಲ್ಲಿ ಕಚೇರಿಗೆ ಜಾಗ ಖರೀದಿಸಿ ಕೂರ್ಗ್ ಅಡ್ವೆಂಚರ್ ಕ್ಲಬ್ ಸ್ಥಾಪಿಸಿ, ಸ್ಥಳೀಯರನ್ನು ಸಾಹಸ ಕ್ರೀಡೆಯತ್ತ ವಾಲುವಂತೆ ಮಾಡಲಾಯಿತು. ಒಬ್ಬ ಸದಸ್ಯನ ಮರಣದ ನಂತರ ಪತ್ನಿ, ಒಬ್ಬ ಮಕ್ಕಳಿಗೆ ಸದಸ್ಯತ್ವವನ್ನು ಮುಂದುವರಿಸುವುದು, ಅಜೀವ ಸದಸ್ಯತ್ವದ ಮೂಲಕ ಸಂಘವನ್ನು ಬೆಳೆಸಲಾಯಿತು. ಸಮೀಪದಲ್ಲಿದ್ದ ಕೆರೆಯನ್ನು ವಿಸ್ತರಿಸಿ ತರಬೇತಿಗೆ ಅವಕಾಶ ಮಾಡಿ, ನಂತರ ತರಬೇತಿಗಾಗಿ ಅಂಡಮಾನ್, ಹುಣಸೂರು ಭಾಗದ ಹೈರಿಗೆ ಎಂಬಲ್ಲಿ ಕೂಡ ತರಬೇತಿ ನೀಡಿರುವ ಬಗ್ಗೆ ಮಾಹಿತಿ ನೀಡಿದರು.

ಮಾದರಿಗಳು : ಮೂಲ ಸೌಕರ್ಯಗಳೊಂದಿಗೆ ಕಾರ್ಯ ನಿರ್ವಹಿಸಲು ಕುಂದಾ ಬೆಟ್ಟದಲ್ಲಿ ರಾಕ್ ಕ್ಲೆöÊಂಬಿAಗ್ ಹಾಗೂ ಕಾಕೋಟುಪರಂಬು ಎಂಬಲ್ಲಿ ತಾವೇ ಪ್ರದರ್ಶನ ನೀಡಿದ್ದು, ಕ್ಲಬ್ ಸಾಹಸ ಕ್ರೀಡೆಗಳಿಗೆ ತರಬೇತಿ ನೀಡುವ ಸಲುವಾಗಿ ಟೆರೆಸ್ಟಿçಯಲ್ ಆಕ್ಟಿವಿಟಿ, ಆಕ್ವಾ ಸ್ಪೋರ್ಟ್ಸ್ ಹಾಗೂ ಏರೋ ಸ್ಪೋರ್ಟ್ಸ್ ವಿಭಾಗಗಳನ್ನು ಪ್ರಾರಂಭಿಸಲಾಯಿತು. ಏರೋ ಸ್ಪೋರ್ಟ್ಸ್ ವಿಭಾಗದ ಪ್ಯಾರಾ ಗ್ಲೆöÊಡಿಂಗ್ ತರಬೇತಿಯನ್ನು ಸದಸ್ಯರಿಗೆ ಪೂನಾದಲ್ಲಿ ನೀಡಲಾಯಿತು. ನಂತರ ಜಿಲ್ಲೆಯಲ್ಲಿ ಮಾದಾಪುರ ಹಾಗೂ ಹುದಿಕೇರಿಯಲ್ಲಿ ಪ್ಯಾರಾ ಸೇಲಿಂಗ್ ಮತ್ತು ಪ್ಯಾರಾ ಗ್ಲೆöÊಡಿಂಗ್, ಕೊಚ್ಚಿನ್‌ನಲ್ಲಿ ಆಕ್ವಾ ಸ್ಪೋರ್ಟ್ಸ್ ತರಬೇತಿ, ತಮಿಳುನಾಡಿನ ಕೊಯಂಬತ್ತೂರಿನಿAದ ಕ್ರೀಡೆಗೆ ಅಗತ್ಯವಿರುವ ಬೋಟ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನು ಖರೀದಿಸಿ ಹುಣಸೂರು ಸಮೀಪದ ಹೈರಿಗೆ ಹಾಗೂ ಕೊಡಗು ಜಿಲ್ಲೆಯ ಕೆಕೆಆರ್‌ನಲ್ಲಿ ರ‍್ಯಾಫ್ಟಿಂಗ್ ಪ್ರಾರಂಭಿಸಿ, ಸುಮಾರು ೧೬೫೦ ಉತ್ಸಾಹಿಗಳಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸೇನೆ ಮೂಲ: ೧೯೬೨ ನೇ ಇಸವಿಯಲ್ಲಿ ಚೀನಾದಿಂದ ಭಾರತದ ಮೇಲೆ ನಡೆದ ಆಕ್ರಮಣ ಸೈನ್ಯಕ್ಕೆ ಸೇರಲು ಹುರಿದುಂಬಿಸಿತು. ತರಬೇತಿಯನ್ನು ಐಎಂಎ ದೆಹರಾಡೂನ್‌ನಲ್ಲಿ ಪಡೆದು ಮರಾಠ ರೆಜಿಮೆಂಟ್ ಆಯ್ಕೆ ಮಾಡಿಕೊಂಡು, ೧೯೬೩ ರಲ್ಲಿ ಕರ್ತವ್ಯ ಪ್ರಾರಂಭಿಸಲಾಯಿತು. ಯುದ್ಧ ಮತ್ತು ದೇಶದ ಮಣ್ಣಿನ ರಕ್ಷಣೆಗೆ ಬೆಟ್ಟ-ಗುಡ್ಡ ಹತ್ತಿದ ಅನುಭವದೊಂದಿಗೆ ಜಿಲ್ಲೆಯಲ್ಲಿ ಅಡ್ವೆಂಚರ್ ಆರಂಭಿಸಲು ಆಸಕ್ತಿ ಮೂಡಿಸಿತು. ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿಕೊಂಡು ಮರಾಠÀ ರಿಜಿಮೆಂಟ್‌ನಲ್ಲಿ ಮರಾಠ ಲೈಟ್ ಇನೆÀ್ಫಂಟ್ರಿಯ ೨೦ ಬೆಟಾಲಿಯನ್‌ನಲ್ಲಿ ಲೆಫ್ಟಿನೆಂಟ್ ಹುದ್ದೆ, ನಂತರದ ಬೆಳವಣಿಗೆಯಲ್ಲಿ ಕಾಶ್ಮೀರ ಯುದ್ಧ, ಬಾಂಗ್ಲಾದೇಶದ ವಿರುದ್ಧದ ಯುದ್ಧ, ನಕ್ಸಲ್ ನಿಗ್ರಹದಲ್ಲಿ ಕೂಡ ಇವರು ಎದೆಗುಂದದೆ ಹೋರಾಡಿದ ಫಲವಾಗಿ ಹೆಚ್ಚು ಸಾಹಸ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶವಾಯಿತು. ಇಬ್ಬರು ಪುತ್ರಿಯರನ್ನು ರಾಕ್ ಕ್ಲೆöÊಂಬಿAಗ್ ರಾಮನಗರದಲ್ಲಿ ತರಬೇತಿ ನೀಡಿ, ಮನೆಯ ಕೆಲಸಗಳು ಹಾಗೂ ಕೃಷಿಯಿಂದ ದೂರ ಸರಿದು ಸಾಹಸ ಕ್ರೀಡೆಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟು ಗಮನ ಸೆಳೆದರು. ಇವರು ಸ್ಥಾಪಿಸಿದ ಅಡ್ವೆಂಚರ್ ಕ್ಲಬ್ ಭವಿಷ್ಯದಲ್ಲಿ ಮತ್ತಷ್ಟು ಯುವ ಸಮೂಹಕ್ಕೆ ನೆರವಾಗಲಿ ಎಂಬ ಆಶಯ ತೋಡಿಕೊಂಡರು.

ಕಾರ್ಯಕ್ರಮ ಸಂದರ್ಭ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್‌ಕುಮಾರ್, ನಿರ್ದೇಶಕರಾದ ದರ್ಶನ್ ದೇವಯ್ಯ, ಚನ್ನನಾಯಕ, ಜಗದೀಶ್ ಜೋಡುಬೀಟಿ, (ನಿ) ಲೆಫ್ಟಿನೆಂಟ್ ಕರ್ನಲ್ ಚೆಪ್ಪುಡೀರ ಎ. ತಮ್ಮಪ್ಪ ಅವರ ಪತ್ನಿ ಸರು ಪೊನ್ನಮ್ಮ ಇದ್ದರು.