ಮಡಿಕೇರಿ, ಜು. ೨೨: ರೀಬಿಲ್ಡ್ ಕೊಡಗು ಸಂಸ್ಥೆ ಕಾರ್ಮಾಡು-ಅಮ್ಮತ್ತಿ ಸಮುದಾಯ ಭವನಕ್ಕೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದೆ. ಸಂಸ್ಥೆಯ ವ್ಯವಸ್ಥಾಪಕÀ ಕೆ.ಎ. ಕುಶಾಲಪ್ಪ ಮಾತನಾಡಿ, ೨೦೧೮ರಿಂದ ಕೊಡಗಿನಲ್ಲಿ ರೀಬಿಲ್ಡ್ ಸಂಸ್ಥೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಶಾಲೆಗಳಿಗೆ ಕಂಪ್ಯೂಟರ್, ಪುಸ್ತಕ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ ಎಂದರು.
ಮತ್ತೋರ್ವ ವ್ಯವಸ್ಥಾಪಕಿ ಪಾಲಂದಿರ ರಾಧಾ ಮಾತನಾಡಿ, ಸಂಘ-ಸAಸ್ಥೆಗಳು ನೀಡುವ ಮತ್ತು ಸರಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಮುದಾಯ ಭವನ ಸಮಿತಿಯ ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಕಿರಣ್, ಹೆಚ್.ಎನ್. ಅಭಿಜಿತ್ ಹಾಗೂ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.