ಮಡಿಕೇರಿ, ಜು. ೨೨: ಭಾಗಮಂಡಲದ ರೈತ ಉತ್ಪಾದನಾ ಸಂಸ್ಥೆಯ ಗೋದಾಮು ಸಂಗ್ರಹಣಾ ಕೇಂದ್ರ ಮಾರಾಟ ಮಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯಿಂದ ರೂ. ೨೭.೫೨ ಲಕ್ಷ ಅನುದಾನದ ಚೆಕ್‌ನ್ನು ಸಂಘದ ಅಧ್ಯಕ್ಷ ಕೋಡಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ. ಬೋಪಯ್ಯ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಕೃಷಿಗೆ ಬೇಕಾದ ಗೊಬ್ಬರ ಸಲಕರಣೆಗಳನ್ನು ರೈತರಿಗೆ ಒದಗಿಸಲು ಒಂದು ಸ್ವಯುತವಾದ ಸಂಘವನ್ನು ನಿರ್ಮಿಸಿಕೊಳ್ಳಲು ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ಸಹಕಾರ ನೀಡುತ್ತದೆ.

ಆ ನಿಟ್ಟಿನಲ್ಲಿ ಪ್ರಗತಿಪರ ರೈತರು ಭಾಗಮಂಡಲದಲ್ಲಿ ಸಹಕಾರಿ ಸಂಸ್ಥೆ ಕಟ್ಟಿಕೊಂಡಿದ್ದು, ಈಗಾಗಲೇ ಸಂಘವು ಜಾಗವನ್ನು ಖರೀದಿ ಮಾಡಿದೆ. ಈ ಸಹಕಾರಿ ಸಂಘಕ್ಕೆ ಬೇಕಾದ ಕಟ್ಟಡ, ಕಚೇರಿ, ಗೋದಾಮುಗಳ ನಿರ್ಮಾಣಕ್ಕೆ ಮೊದಲ ಹಂತವಾಗಿ ರೂ.೨೭.೫೨ ಲಕ್ಷ ರೂ.ಗಳನ್ನು ಸರ್ಕಾರದ ವತಿಯಿಂದ ಸಂಘಕ್ಕೆ ಹಸ್ತಾಂತರಿಸಲಾಗಿದೆ ಎಂದು ಕೆ.ಜಿ. ಬೋಪಯ್ಯ ಅವರು ಹೇಳಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಿ.ಎಂ.ಪ್ರಮೋದ್ ಮಾತನಾಡಿ, ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯನ್ನು ಕಂಪೆನಿ ಕಾಯಿದೆಯಡಿಯಲ್ಲಿ ೨೦೧೬ ರಲ್ಲಿ ಒಟ್ಟು ೧೦೪೦ ರೈತರನ್ನು ಸಂಸ್ಥೆಯಲ್ಲಿ ನೋಂದಣಿ ಮಾಡಲಾಗಿದೆ ಎಂದರು.

ಈಗಾಗಲೇ ಸಂಸ್ಥೆಯು ರೈತರಿಂದ ತೋಟಗಾರಿಕೆ ಉತ್ಪನ್ನಗಳನ್ನು ಖರೀದಿಸಿ ಸಂಸ್ಥೆಯ ಹೆಸರಿನಲ್ಲಿ ಬ್ರಾö್ಯಂಡ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೂ ರೈತರಿಗೆ ಬೇಕಾಗುವ ಗೊಬ್ಬರ, ಕ್ರಿಮಿನಾಶಕಗಳನ್ನು ಸಹ ಸಂಸ್ಥೆಯಿAದ ನಿಗದಿತ ದರದಲ್ಲಿ ನೀಡಲಾಗುತ್ತಿದೆ. ಈ ಸಂಸ್ಥೆಯು ಸಿಂಗತ್ತೂರು ಗ್ರಾಮದಲ್ಲಿ ಸರ್ವೆ ನಂಬರ್ ೨೫/೩ ರಲ್ಲಿ ೦.೫೦ ಎಕರೆ ಸ್ವಂತ ಜಮೀನನ್ನು ಹೊಂದಿದೆ ಎಂದು ತಿಳಿಸಿದರು.

ಸಂಸ್ಥೆಯ ವ್ಯವಹಾರಗಳನ್ನು ಬಲವರ್ದನೆ ಮಾಡಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಗೋದಾಮು, ೧ ಸಂಗ್ರಹಣಾ, ಪ್ಯಾಕಿಂಗ್ ಘಟಕ ಮತ್ತು ಮಾರಾಟ ಮಳಿಗೆಯನ್ನು ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನವನ್ನು ಕಟ್ಟಡ ಕೊಡಗು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕೋಡಿ ಪೊನ್ನಪ್ಪ, ಸಂಸ್ಥೆಯ ಉಪಾಧ್ಯಕ್ಷ ಕಿಶೋರ್ ಬಿ.ಎಂ., ಸಂಸ್ಥೆಯ ನಿರ್ದೇಶಕರಾದ ಡಿ.ಎಸ್. ಹರ್ಷ, ಪಿ.ಸಿ. ವಿಠಲ, ಕೆ.ಯು. ನಾಗೇಂದ್ರ, ಸಂಸ್ಥೆಯ ವ್ಯವಸ್ಥಾಪಕರಾದ ಬಿ.ಎಸ್. ಬಿನ್ನಿ, ಮಡಿಕೇರಿ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಎಂ.ವೈ. ಸತೀಶ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಸಚಿನ್ ಇತರರು ಇದ್ದರು.