ಮುಳ್ಳೂರು, ಜು. ೨೨: ಮಾನವೀಯ ಸಂಬAಧಗಳ ಬೆಸುಗೆ, ಮಾನವೀಯ ಮೌಲ್ಯ ಮುಂತಾದ ಮಾನವೀಯ ಗುಣಗಳ ಜೊತೆಯಲ್ಲಿ ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲೂ ರೋಟರಿ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಪದಗ್ರಹಣ ಅಧಿಕಾರಿ ಡಾ. ಸಿ.ಆರ್. ಪ್ರಶಾಂತ್ ಅಭಿಪ್ರಾಯಪಟ್ಟರು.

ಅರಿಶಿನಗುಪ್ಪೆ ಗ್ರಾಮದ ಎಂ.ಟಿ. ಬೇಬಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ರೋಟರಿ ಮಲ್ಲೇಶ್ವರ ಆಲೂರು-ಸಿದ್ದಾಪುರ ಇದರ ೨೦೨೨-೨೩ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ರೋಟರಿ ಕ್ಲಬ್ ಜಿಲ್ಲಾ ಸಹಾಯಕ ರಾಜ್ಯಪಾಲ ಎಸ್.ಕೆ. ಸತೀಶ್ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಜಿಲ್ಲಾ ಪ್ರಮುಖ ಎಂ.ಡಿ. ಲಿಖಿತ್, ರೋಟರಿ ಮಲ್ಲೇಶ್ವರ ಆಲೂರು-ಸಿದ್ದಾಪುರದ ನೂತನ ಅಧ್ಯಕ್ಷ ಎಂ.ಟಿ. ಬೇಬಿ, ನೂತನ ಕಾರ್ಯದರ್ಶಿ ಹೆಚ್.ಎಂ. ಮನೋಹರ್, ನಿಕಟಪೂರ್ವ ಅಧ್ಯಕ್ಷ ಪಿ.ಇ. ವೆಂಕಟೇಶ್, ನಿಕಟಪೂರ್ವ ಕಾರ್ಯದರ್ಶಿ ಹೆಚ್.ಜೆ. ಲೋಕೇಶ್, ರೋಟರಿ ಪ್ರಮುಖ ಹೆಚ್.ವಿ. ದಿವಾಕರ್, ಆಲೂರು-ಸಿದ್ದಾಪುರ ರೋಟರಿ ಕ್ಲಬ್ ಸದಸ್ಯರುಗಳು ಸೇರಿದಂತೆ ವಿವಿಧ ರೋಟರಿ ಕ್ಲಬ್ ಸದಸ್ಯರು, ರೋಟರಿ ಕ್ಲಬ್ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.