ನಾಪೋಕ್ಲು, ಜು. ೨೨: ಕಾಡಾನೆಗಳ ಹಾವಳಿಯಿಂದ ನೆಲಜಿ, ಪೇರೂರು, ದೊಡ್ಡಪುಲಿಕೋಟು ಮತ್ತು ಅಯ್ಯಂಗೇರಿ ಗ್ರಾಮಸ್ಥರು ಪರಿತಪಿಸುವಂತಾಗಿದೆ. ಕಾಫಿ ತೋಟಗಳಿಗೆ ನುಗ್ಗಿ ಕಾಫಿ, ಬಾಳೆ, ಅಡಿಕೆ, ತೆಂಗು ಮತ್ತಿತರ ಬೆಳೆಗಳನ್ನು ಧ್ವಂಸ ಮಾಡುತ್ತಿರುವುದರಿಂದ ಅಪಾರ ನಷ್ಟ ಸಂಭವಿಸಿ, ಚಿಂತಾಕ್ರಾAತ ರಾಗಿ ಕೃಷಿಕರು ಅಳಲು ತೋಡಿ ಕೊಂಡಿದ್ದಾರೆ. ಮಣವಟ್ಟಿರ ಮಾಚಯ್ಯ ದೊಡ್ಡಪುಲಿಕೋಟು ಗ್ರಾಮದಲ್ಲಿ ಕಾಫಿ ತೋಟವನ್ನು ಹೊಂದಿದ್ದು, ಕಳೆದ ಕೆಲವು ದಿನಗಳಿಂದ ತೋಟಕ್ಕೆ ಕಾಡಾನೆಗಳು ಸತತವಾಗಿ ಲಗ್ಗೆಯಿಡುತ್ತಿದ್ದು, ಅಪಾರ ಪ್ರಮಾಣದ ಕಾಫಿ ಗಿಡ ಹಾಗೂ ಬಾಳೆ ನಾಶವಾಗಿ ನಷ್ಟ ಸಂಭವಿಸಿದೆ.

ಮಾಚಯ್ಯ ಅವರ ತೋಟದ ಸುತ್ತಮುತ್ತಲಿನ ಹಲವು ತೋಟಗಳಲ್ಲಿ ಕಾಡಾನೆಗಳು ಅಡ್ಡಾಡಿ ಧ್ವಂಸ ಮಾಡಿದ್ದು ಬೆಳೆಗಾರರಿಗೆ ಆತಂಕ ಕಾಡುತ್ತಿದ್ದು, ಚಿಂತಾಕ್ರಾAತರಾಗಿದ್ದಾರೆ. ಆನೆಗಳ ಉಪಟಳವನ್ನು ತಗ್ಗಿಸಲು ತೋಟದಲ್ಲಿನ ಬಾಳೆಯ ಗಿಡಗಳನ್ನು ಕಡಿದು, ಹಲಸಿನ ಹಣ್ಣುಗಳನ್ನು ಕೊಯ್ಲು ಮಾಡಿ ಎಸೆಯುತ್ತಿದ್ದಾರೆ. ಒಟ್ಟಿನಲ್ಲಿ ಕಾಡಾನೆಗಳ ಹಾವಳಿ ಇಳಿಮುಖಗೊಂಡರೆ ಸಾಕು ಎಂದು ಪರಿತಪಿಸುತ್ತಿದ್ದಾರೆ ಇಲ್ಲಿನ ಬೆಳೆಗಾರರು.