*ಸಿದ್ದಾಪುರ, ಜು. ೨೧: ವಾಲ್ನೂರು ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಈ ಬಾರಿ ಸುರಿದ ಅತಿಮಳೆಯಿಂದ ಕಾಫಿಗೆ ಕೊಳೆ ರೋಗ ಬಂದಿದೆ.
ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರನಿದ್ದು, ಕಾಫಿ ಬೆಳೆ ಕೊಳೆತು ನೆಲಕಚ್ಚುತ್ತಿದೆ. ಕಳೆದ ಬಾರಿಗಿಂತ ಪ್ರಸ್ತುತ ವರ್ಷ ಹೆಚ್ಚು ಮಳೆಯಾಗಿದ್ದು, ಕಾಫಿ ಕೊಳೆತು ಹೋಗಿದೆ. ಪ್ರಾಕೃತಿಕ ವಿಕೋಪ ಗಾಯದ ಮೇಲೆ ಬರೆ ಎಳೆದಂತಾಗಿದೆ, ಅಲ್ಲದೆ ಇದರೊಂದಿಗೆ ಪ್ರವಾಹ, ಕಾಡಾನೆ ದಾಳಿಯೂ ಬೆಳೆಗಾರರನ್ನು ಕಂಗಾಲಾಗಿಸಿದೆ. ಕಾಫಿ ಬೆಳೆಯುವುದನ್ನೇ ನಿಲ್ಲಿಸಬೇಕು ಎನ್ನುವಷ್ಟರ ಮಟ್ಟಿಗೆ ಮನಸ್ಸಿಗೆ ನೋವಾಗಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಸದಸ್ಯ ಭುವನೇಂದ್ರ ಸರಕಾರ ಬೆಳೆಗಾರರ ನೆರವಿಗೆ ಬರಬೇಕು ಮತ್ತು ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.