ಸೋಮವಾರಪೇಟೆ, ಜು. ೨೦: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಾರ್ಕೆಟ್ ಏರಿಯಾದಲ್ಲಿ ಅನಧಿಕೃತ ಮತ್ತು ಅಕ್ರಮ ಮಳಿಗೆಗಳ ತೆರವಿಗೆ ಪಟ್ಟಣ ಪಂಚಾಯಿತಿ ಮುಂದಾಗಿರುವ ಕ್ರಮಕ್ಕೆ ರಾಜ್ಯ ಹೈಕೋರ್ಟ್ನಿಂದ ತಡೆಯಾಜ್ಞೆ ತರಲಾಗಿದೆ ಎಂದು ವರ್ಕ್ಶಾಪ್ ಏರಿಯಾ ಕೆಲಸಗಾರರು ಮತ್ತು ಶೆಡ್ ಮಾಲೀಕರ ಸಂಘ ತಿಳಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಪದಾಧಿಕಾರಿಗಳು, ಸೋಮವಾರ ಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾರ್ಕೆಟ್ ಏರಿಯಾವನ್ನು ಏಕಾಏಕಿ ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಮುಂದಾಗಿದೆ. ಈ ಕ್ರಮದಿಂದ ಕಳೆದ ೫೦ಕ್ಕೂ ಅಧಿಕ ವರ್ಷಗಳಿಂದ ಸಣ್ಣ ಪುಟ್ಟ ಕೈಗಾರಿಕೆ ವ್ಯಾಪಾರ ನಡೆಸಿಕೊಂಡು ಜೀವನ ಕಂಡುಕೊAಡಿರುವ ಬಡವರು ನಿರ್ಗತಿಕರಾಗಲಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿಯ ಈ ಕ್ರಮವನ್ನು ರಾಜ್ಯ ಹೈಕೋರ್ಟ್ನಲ್ಲಿ ವಕೀಲ ಎ.ಎಸ್. ಪೊನ್ನಣ್ಣ ಅವರ ಮೂಲಕ ಪ್ರಶ್ನಿಸಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಙೆ ತರಲಾಗಿದೆ. ಪಂಚಾಯಿತಿಯು ಮಾರ್ಕೆಟ್ ಏರಿಯಾದ ಬಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ವರೆಗೂ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಈವರೆಗೆ ಕಂದಾಯವನ್ನು ಕಟ್ಟಿಸಿಕೊಳುತ್ತಿದ್ದ ಪಂಚಾಯಿತಿ ಕಳೆದ ೩ ವರ್ಷದಿಂದ ಕಂದಾಯವನ್ನು ಕಟ್ಟಿಸಿಕೊಳ್ಳುತ್ತಿಲ್ಲ. ಕೆಲವು ಕಟ್ಟಡಗಳ ಮಾಲೀಕರು ನಿಧನರಾಗಿದ್ದು ಅಂತಹ ಮಳಿಗೆಗಳನ್ನು ಅವರ ಮನೆಯವರು ಮುಂದುವರೆಸಿಕೊAಡು ಬರುತ್ತಿದ್ದಾರೆ. ಈಗಿರುವ ಅಂಗಡಿ ಮಾಲೀಕರುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಮಾರ್ಕೆಟ್ ಏರಿಯಾ ತೆರವಿಗೆ ಕ್ರಮ ಕೈಗೊಳ್ಳಬೇಕು. ನೂತನವಾಗಿ ನಿರ್ಮಾಣಗೊಳ್ಳುವ ವಾಣಿಜ್ಯ ಮಳಿಗೆಗಳಲ್ಲಿ ಈಗಿರುವವರಿಗೆ ಆದ್ಯತೆಯ ಮೇರೆ ಮಳಿಗೆಗಳನ್ನು ನೀಡಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು, ಹೀಗಾದಲ್ಲಿ ನಾವುಗಳೇ ಮಳಿಗೆಗಳನ್ನು ತೆರವುಗೊಳಿಸಿ ಕೊಡುತ್ತೇವೆ ಎಂದರು.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಕೆ.ಎ. ಜಾರ್ಜ್, ಸದಸ್ಯರಾದ ಅನಿಲ್, ಶರ್ಮಿಳ ರಮೇಶ್, ರಹೀಂ ಬೇಗ್ ಉಪಸ್ಥಿತರಿದ್ದರು. ಏರಿಯಾ ತೆರವಿಗೆ ಕ್ರಮ ಕೈಗೊಳ್ಳಬೇಕು. ನೂತನವಾಗಿ ನಿರ್ಮಾಣಗೊಳ್ಳುವ ವಾಣಿಜ್ಯ ಮಳಿಗೆಗಳಲ್ಲಿ ಈಗಿರುವವರಿಗೆ ಆದ್ಯತೆಯ ಮೇರೆ ಮಳಿಗೆಗಳನ್ನು ನೀಡಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು, ಹೀಗಾದಲ್ಲಿ ನಾವುಗಳೇ ಮಳಿಗೆಗಳನ್ನು ತೆರವುಗೊಳಿಸಿ ಕೊಡುತ್ತೇವೆ ಎಂದರು.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಕೆ.ಎ. ಜಾರ್ಜ್, ಸದಸ್ಯರಾದ ಅನಿಲ್, ಶರ್ಮಿಳ ರಮೇಶ್, ರಹೀಂ ಬೇಗ್ ಉಪಸ್ಥಿತರಿದ್ದರು.