ಮುಳ್ಳೂರು, ಜು. ೨೧: ಸಮೀಪದ ಬೆಸೂರು ಗ್ರಾ.ಪಂ. ವತಿಯಿಂದ ವಿಶೇಷಚೇತನರಿಗೆ ವಿವಿಧ ಸಲಕರಣೆ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀಲ್‌ಚೇರ್, ನೀರಿನ ಸಿಂಟೆಕ್ಸ್, ಸೋಲಾರ್ ಲೈಟ್ ಮುಂತಾದ ಉಪಯೋಗಿ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಸೂರು ಗ್ರಾ.ಪಂ. ಅಧ್ಯಕ್ಷೆ ಸವಿತ ಶೇಖರ್ ಮಾತನಾಡಿದರು.

ಗ್ರಾ.ಪಂ. ಸದಸ್ಯ ಕಿಶನ್‌ಕುಮಾರ್ ಯೋಜನೆ ಕುರಿತು ಪ್ರಾಸ್ತಾವಿಕ ನುಡಿಯಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಜಯರಾಜ್, ಕಮಲಮ್ಮ, ಗ್ರಾ.ಪಂ. ಪಿಡಿಓ ಸುರೇಶ್, ಗ್ರಾ.ಪಂ. ಸಿಬ್ಬಂದಿ, ಫಲಾನುಭವಿಗಳು ಹಾಜರಿದ್ದರು.