ಮಡಿಕೇರಿ, ಜು. ೨೧: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದೇವಾಟ್‌ಪರಂಬು ಕೊಡವ ಹತ್ಯಾಕಾಂಡ ಸ್ಮಾರಕದಲ್ಲಿ ತಾ.೨೦ ರಂದು ಬೆಳಿಗ್ಗೆ ಪುಷ್ಪನಮನ ಸಲ್ಲಿಸಲಾಯಿತು. ಟಿಪ್ಪು ಸುಲ್ತಾನ್‌ನ ಮೋಸದ ದಾಳಿಗೆ ಸಿಲುಕಿ ಹುತಾತ್ಮರಾದ ಹಿರಿಯರಿಗೆ ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅವರ ನೇತೃತ್ವದಲ್ಲಿ ಮೀದಿ ಅರ್ಪಿಸಿ ಪ್ರಾರ್ಥನೆ ನೆರವೇರಿತು. ದೇವಾಟ್‌ಪರಂಬು ನರಮೇಧ ನಡೆದ ಸ್ಥಳದಲ್ಲಿ ಅಂತರರಾಷ್ಟಿçÃಯ ಕೊಡವ ಹತ್ಯಾಕಾಂಡ ಸ್ಮಾರಕ ನಿರ್ಮಿಸುವಂತಾಗಬೇಕೆAದು ಆಶಿಸಿರುವ ಸಿ.ಎನ್.ಸಿ, ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ, ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸುವಂತೆ ಪ್ರಾರ್ಥಿಸಲಾಯಿತು.

ಈ ಸಂದರ್ಭ ಸಂಘಟನೆಯ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಮಂದಪAಡ ಮನೋಜ್, ಅರೆಯಡ ಗಿರೀಶ್, ಚೀಯಬೆರ ಸತೀಶ್ ಸೋಮಣ್ಣ ಹಾಜರಿದ್ದರು.