ಮಡಿಕೇರಿ, ಜು. ೨೧: ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ರೂ. ೧,೮೧,೦೦,೦೦೦ಗಳನ್ನು ಕೊಡಗು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದು, ವಿವರ ಈ ಕೆಳಕಂಡAತಿವೆ:

ಮಡಿಕೇರಿ ತಾಲೂಕು ನರಿಯಂದಡ ಗ್ರಾ.ಪಂ. ವ್ಯಾಪ್ತಿಯ ಅರಪಟ್ಟು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ಸಮೀಪ ಇಂಟರ್‌ಲಾಕ್ ನಿರ್ಮಾಣದ ಕಾಮಗಾರಿ ರೂ. ೧೦ ಲಕ್ಷ, ಪಾರಾಣೆ ಗ್ರಾ.ಪಂ. ವ್ಯಾಪ್ತಿಯ ಕಿರುಂದಾಡು ಗ್ರಾಮದ ಬಾದುಮಂಡ, ಅಪ್ಪನೆರವಂಡ ಕೋಳಿಮುಟ್ಟ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ. ೫ ಲಕ್ಷ, ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯ ಅರ ಬಲ್ಲಮಾವಟಿ ಪೇರೂರು ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗಾಗಿ ರೂ. ೫ ಲಕ್ಷ, ಮರಗೋಡು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಅಚ್ಚಕಾಳೇರ, ಕಾಮಗಾರಿ ರೂ. ೧೦ ಲಕ್ಷ, ಪಾರಾಣೆ ಗ್ರಾ.ಪಂ. ವ್ಯಾಪ್ತಿಯ ಕಿರುಂದಾಡು ಗ್ರಾಮದ ಬಾದುಮಂಡ, ಅಪ್ಪನೆರವಂಡ ಕೋಳಿಮುಟ್ಟ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ. ೫ ಲಕ್ಷ, ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯ ಅರ ಬಲ್ಲಮಾವಟಿ ಪೇರೂರು ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗಾಗಿ ರೂ. ೫ ಲಕ್ಷ, ಮರಗೋಡು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಅಚ್ಚಕಾಳೇರ, ರೂ. ೫ ಲಕ್ಷ, ಹೊಸ್ಕೇರಿ ಗ್ರಾ. ಪಂ. ವ್ಯಾಪ್ತಿಯ ಪೇರಿಯನ ಬಕ್ಕ ರಸ್ತೆಗೆ ಡಾಂಬರೀಕರಣ

(ಮೊದಲ ಪುಟದಿಂದ) ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ತಾವೂರು ಗ್ರಾಮ ಮಹಿಷಾಸುರ ಮರ್ಧಿನಿ ದೇವಸ್ಥಾನದ ಸಮೀಪ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರೂ. ೫ ಲಕ್ಷ, ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮಕ್ಕಂದೂರು ಗ್ರಾಮದ ತಂತಿಪಾಲ ಕೂಡು ರಸ್ತೆ ಬಳಿಯಿಂದ ಕುಂಬುಗೌಡನ ದೊಡ್ಡ ಮನೆಗೆ ಹೋಗುವ ಕೆರೆಮೊಟ್ಟೆ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕೆ.ನಿಡುಗಣೆ ಗ್ರಾಮದ ಹುತ್ತರಿ ಊರೋರ್ಮೆ ಸಮುದಾಯ ಭವನಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ನಾಪೋಕ್ಲು ಗ್ರಾ.ಪಂ. ವ್ಯಾಪ್ತಿಯ ವೆಸ್ಟ್ ಕೋಕೇರಿ ಭಗವತಿ ದೇವಸ್ಥಾನದ ಸಮೀಪ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. ೫ ಲಕ್ಷ.

ಸೋಮವಾರಪೇಟೆ ಕಕ್ಕೆಹೊಳೆ ಸಮೀಪ ಶ್ರೀ ಮುತ್ತಪ್ಪ ಮತ್ತು ಅಯ್ಯಪ್ಪ ದೇವಾಲಯದ ಸಮೀಪವಿರುವ ಸಭಾ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಸೋಮವಾರಪೇಟೆ ಶ್ರೀ ಆಂಜನೇಯ ದೇವಾಲಯದ ಸಮೀಪ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರೂ.೧೦ ಲಕ್ಷ ಮೀಸಲಿಡಲಾಗಿದೆ. ಸೋಮವಾರಪೇಟೆ ಪಟ್ಟಣದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯದ ಸಮೀಪವಿರುವ ಸಮುದಾಯ ಭವನ ನಿರ್ಮಾಣ ಕಾಮಗಾರಿಗಾಗಿ ರೂ.೫ ಲಕ್ಷ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿಂದೂ ಮಲಯಾಳಿ ಸಮಾಜದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ತೊರೆನೂರು ಗ್ರಾ.ಪಂ. ಯ ಎಸ್.ಸಿ. ಕಾಲೋನಿಯಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ನಾಕೂರು - ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯ ಹೇರೂರು ಶ್ರೀ ಬಸವೇಶ್ವರ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಸೋಮವಾರಪೇಟೆ ವರ್ತಕರ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ತಣ್ಣೀರುಹಳ್ಳ ಶ್ರೀ ಬಸವೇಶ್ವರ ದೇವಾಲಯದ ಸಮೀಪ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರೂ.೩ ಲಕ್ಷ, ಚೌಡ್ಲು ಗ್ರಾ.ಪಂ. ಯ ಭಾರತೀಯ ಯುವಕರ ಸಂಘದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೩ ಲಕ್ಷ, ಕೊಡಗರಹಳ್ಳಿ ಗ್ರಾ.ಪಂ.ಯ ಬೈತೂರಪ್ಪ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೪ ಲಕ್ಷ, ಮಳ್ತೆ ಗ್ರಾ.ಪಂ.ಯ ಕೂಗೇಕೋಡಿ ಶ್ರೀ ಬಸವೇಶ್ವರ ಸಂಘದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೩ ಲಕ್ಷ, ಗೌಡಳ್ಳಿ ಗ್ರಾ.ಪಂ.ಯ ನವದುರ್ಗ ಶ್ರೀ ಪರಮೇಶ್ವರಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಾಗಿ ರೂ.೪ ಲಕ್ಷ, ಹಾನಗಲ್ಲು ಗ್ರಾ.ಪಂ.ಯ ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಛೇಂಬರ್ ಅಭಿವೃದ್ಧಿ ಕಾಮಗಾರಿಗಾಗಿ ರೂ.೩ ಲಕ್ಷ, ಗಣಗೂರು ಗ್ರಾ.ಪಂ.ಯ ಆಡಿನಾಡೂರು ಶ್ರೀ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗಾಗಿ ರೂ.೩ ಲಕ್ಷ, ಗುಡ್ಡೆಹೊಸೂರು ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ- ಚೌಡೇಶ್ವರಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಾಗಿ ರೂ.೩ ಲಕ್ಷ, ದುಂಡಳ್ಳಿ ಗ್ರಾ.ಪಂ. ಮಾದ್ರೆ ಗ್ರಾಮದ ಸಮುದಾಯ ಭವನ ನಿರ್ಮಾಣ ಕಾಮಗಾರಿಗಾಗಿ ರೂ.೩ ಲಕ್ಷ, ಕೂಡುಮಂಗಳೂರು ಗ್ರಾ.ಪಂ. ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗಾಗಿ ರೂ.೩ ಲಕ್ಷ, ಸೋಮವಾರಪೇಟೆ ತಾಲೂಕು ಅಕ್ಕನ ಬಳಗ ಕಟ್ಟಡದ ಮುಂದುವರಿದ ಕಾಮಗಾರಿಗಾಗಿ ರೂ.೫ ಲಕ್ಷ, ಶನಿವಾರಸಂತೆ ಶ್ರೀ ಗಣಪತಿ, ಪಾರ್ವತಿ, ಚಂದ್ರಮೌಳೇಶ್ವರ ದೇವಾಲಯ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರೂ.೪ ಲಕ್ಷ, ಬಿರುನಾಣಿ ಗ್ರಾ.ಪಂ.ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಮೇಲ್ಚಾವಣಿ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ನೋಕ್ಯ ಗ್ರಾಮದ ಚೆಪ್ಪುಡೀರ ಕುಟುಂಬಸ್ಥರ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರೂ.೫ ಲಕ್ಷ, ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ವಿ.ಬಾಡಗ ಗ್ರಾಮದ ಮಹಾವಿಷ್ಣು ದೇವಸ್ಥಾನದ ಸಮೀಪ ಇಂಟರ್‌ಲಾಕ್ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಕೋಣಗೇರಿ ಗ್ರಾಮದ ಅಜ್ಜಿಕುಟ್ಟೀರ ಮತ್ತು ಕೋದಂಡ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಮಚ್ಚಮಾಡ ಕುಟುಂಬಸ್ಥರ ಐನ್‌ಮನೆಗೆ ಹೋಗುವ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಾಡಗರಕೇರೆ ಗ್ರಾಮದ ಕೂಟಿಯಾಲ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಕಾಕೋಟುಪರಂಬು ಗ್ರಾ.ಪಂ. ವ್ಯಾಪ್ತಿಯ ಬೇತ್ರಿಯಿಂದ ಹೆಮ್ಮಾಡು ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ದೇವನೂರು ಗ್ರಾಮದ ಮಮತ ಕಾಲೋನಿ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಕಣ್ಣಂಗಾಲ ಗ್ರಾಮದ ದೇವಗುಂಡಿ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ, ಹಾತೂರು ಗ್ರಾ.ಪಂ. ವ್ಯಾಪ್ತಿಯ ಕೈಕೇರಿ ಗ್ರಾಮದ ಕುಪ್ಪಂಡ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ನಿರ್ಮಾಣದ ಕಾಮಗಾರಿಗಾಗಿ ರೂ.೫ ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ.