ವೀರಾಜಪೇಟೆ, ಜು. ೨೧: ರಾಜ್ಯದಲ್ಲಿ ಎಲ್ಲೂ ಇಲ್ಲದಂತ ಮಾನವ ವನ್ಯ ಜೀವಿ ಸಂಘÀರ್ಷ ಕೊಡಗಿನಲ್ಲಿ ಹೆಚ್ಚಾಗಿದ್ದು ಕಾಡಾನೆಗಳನ್ನು ಹಿಡಿದು ಹೆಚ್ಚಿನ ಅರಣ್ಯ ವ್ಯಾಪ್ತಿ ಇರುವ ಜಾಗಕ್ಕೆ ಸ್ಥಳಾಂತರ ಮಾಡುದ ಉದ್ದೇಶ ಅರಣ್ಯ ಇಲಾಖೆ ಮುಂದಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ ಹೇಳಿದರು.

ವೀರಾಜಪೇಟೆ ಅರಣ್ಯ ಭವನದಲ್ಲಿ ಕೊಡಗು ಜಿಲ್ಲಾ ರೈತ ಸಂಘ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಂವಾದದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಲವೆಡೆ ಹುಲಿ ದಾಳಿ ಮಾಡುತ್ತಿರುವುದು ಕಂಡು ಬರುತ್ತಿದೆ. ಹುಲಿಯನ್ನು ಹಿಡಿಯಲು ನೀಲಿ ನಕಾಶೆ ಮತ್ತು ನಾಗರಹೊಳೆ ವಿಭಾಗದಲ್ಲಿ ಕಾಡಾನೆ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಆನೆಗಳು ನಾಡಿಗೆ ಬಾರದ ರೀತಿಯಲ್ಲಿ ತಡೆಗಟ್ಟಬಹುದು ಎಂಬಿತ್ಯಾದಿ ಹಲವು ಕ್ರಮಗಳಿಗೆ ಇಲಾಖೆ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರೂ. ೧೨ ಕೋಟಿ ಬಂದಿದೆ. ಅದರಲ್ಲಿ ಬ್ಯಾರಿಕೇಡ್ ಕೆಲಸ ನಡೆಯಲಿದೆ. ಸರಕಾರ ಎಷ್ಟು ಅನುದಾನ ನೀಡುತ್ತದೆಯೋ ಅಷ್ಟು ಕೆಲಸ ಮಾಡಬಹುದು. ನಾಗರಹೊಳೆ ಅರಣ್ಯದ ಸುತ್ತ ಪೂರ್ತಿ ಬ್ಯಾರಿಕೇಡ್ ಹಾಕಲು ಕೋಟ್ಯಾಂತರ ಹಣ ಬೇಕು. ಕಾಮಗಾರಿ ಪೂರ್ತಿಗೊಳ್ಳದ ಹೊರತು ಕಾಡನೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ನಾಡಿನಲ್ಲಿ ಬೀಡು ಬಿಟ್ಟಿರುವ ಕಾಡಾನೆ ಓಡಿಸಲು ಜನರಿಗೆ ರಕ್ಷಣೆ ನೀಡಲು ಅರಣ್ಯ ಸಿಬ್ಬಂದಿ ಕೊರತೆ ಇದ್ದರೂ ಅಗತ್ಯವಾದ ಕೆಲವು ತಾತ್ಕಾಲಿಕ ಸಿಬ್ಬಂದಿಗಳ ನೇಮಕದ ಮೂಲಕ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ನಾಗರಹೊಳೆ ಭಾಗದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಸುಸಜ್ಜಿತ ಕೊಟ್ಟಿಗೆ ನಿರ್ಮಾಣಕ್ಕೆ ರೂ. ೧೦ ಲಕ್ಷ ಅನುದಾನ ಇದ್ದು, ಇದರಲ್ಲಿ ಅಗತ್ಯ ರೈತರಿಗೆ ಅನುದಾನ ನೀಡಲಾಗುತ್ತದೆ. ಕಾಡಾನೆಗಳನ್ನು ಓಡಿಸಿ ಪ್ರಯೋಜನ ಇಲ್ಲ ಎನ್ನುವ ರೈತರ ಮಾತು ಸತ್ಯ. ಈಗಾಗಲೇ ಎರಡು ಆನೆ ಸೆರೆ ಹಿಡಿಯಲಾಗಿದ್ದು ಮಳೆ ನಿಂತ ನಂತರ ಇನ್ನು ಮೂರು ಆನೆಗಳನ್ನು ಹಿಡಿಯಲಾಗುವುದು. ನಾಡಿನಲ್ಲಿ ಗುಂಪಾಗಿರುವ ಕಾಡಾನೆಗಳಲ್ಲಿ ಹೆಣ್ಣಾನೆ ಬಿಟ್ಟು ಕೆಲವು ಸಲಗವನ್ನು ಪ್ರಾಯೋಗಿಕವಾಗಿ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ. ಹೆಣ್ಣಾನೆ ಸ್ಥಳಾಂತರ ಮಾಡಿದರೆ ಉಳಿದ ಆನೆ ಇನ್ನಷ್ಟು ಉಗ್ರವಾಗುತ್ತದೆ. ಕಾಫಿ ಗಿಡ ಒಂದಕ್ಕೆ ಕನಿಷ್ಟ ರೂ. ೬ ಸಾವಿರ ಪರಿಹಾರ ನೀಡುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ವೀರಾಜಪೇಟೆ ಅರಣ್ಯ ಕಚೇರಿಯಲ್ಲಿನ ಭ್ರಷ್ಟತೆ ಆರೋಪದ ಬಗ್ಗೆ ಆಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೊಡಗಿನಲ್ಲಿ ಮಾನವ ವನ್ಯಜೀವಿ ಸಂಘರ್ಷ ತಾರಕಕ್ಕೆ ಏರಿದೆ. ಕಾಡಾನೆಗಳ ಹಾವಳಿಜೊತೆಗೆ ಹುಲಿ ಕೂಡ ನಾಡಿಗೆ ದಾಂಗುಡಿ ಇಟ್ಟು ಜನ-ಜಾನುವಾರುಗಳನ್ನು ಕೊಲ್ಲುತ್ತಿದೆ. ಏನೇ ಸಭೆ ಮಾಡಿದರೂ, ಅರ್ಜಿ ನೀಡಿದರೂ, ಅಧಿಕಾರಿಗಳೂ ಬಂದು ಹೋದರೂ ರೈತರಿಗೆ ಯಾವ ಮುಕ್ತಿ ಇಲ್ಲ. ಹಲವಾರು ಕಡೆ ಜನ ಭಯದಿಂದ ದಿನ ಕಳೆಯುತ್ತಿದ್ದಾರೆ. ರೈಲ್ವೆ ವೀರಾಜಪೇಟೆ, ಜು. ೨೧: ರಾಜ್ಯದಲ್ಲಿ ಎಲ್ಲೂ ಇಲ್ಲದಂತ ಮಾನವ ವನ್ಯ ಜೀವಿ ಸಂಘÀರ್ಷ ಕೊಡಗಿನಲ್ಲಿ ಹೆಚ್ಚಾಗಿದ್ದು ಕಾಡಾನೆಗಳನ್ನು ಹಿಡಿದು ಹೆಚ್ಚಿನ ಅರಣ್ಯ ವ್ಯಾಪ್ತಿ ಇರುವ ಜಾಗಕ್ಕೆ ಸ್ಥಳಾಂತರ ಮಾಡುದ ಉದ್ದೇಶ ಅರಣ್ಯ ಇಲಾಖೆ ಮುಂದಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ ಹೇಳಿದರು.

ವೀರಾಜಪೇಟೆ ಅರಣ್ಯ ಭವನದಲ್ಲಿ ಕೊಡಗು ಜಿಲ್ಲಾ ರೈತ ಸಂಘ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಂವಾದದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಲವೆಡೆ ಹುಲಿ ದಾಳಿ ಮಾಡುತ್ತಿರುವುದು ಕಂಡು ಬರುತ್ತಿದೆ. ಹುಲಿಯನ್ನು ಹಿಡಿಯಲು ನೀಲಿ ನಕಾಶೆ ಮತ್ತು ನಾಗರಹೊಳೆ ವಿಭಾಗದಲ್ಲಿ ಕಾಡಾನೆ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಆನೆಗಳು ನಾಡಿಗೆ ಬಾರದ ರೀತಿಯಲ್ಲಿ ತಡೆಗಟ್ಟಬಹುದು ಎಂಬಿತ್ಯಾದಿ ಹಲವು ಕ್ರಮಗಳಿಗೆ ಇಲಾಖೆ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರೂ. ೧೨ ಕೋಟಿ ಬಂದಿದೆ. ಅದರಲ್ಲಿ ಬ್ಯಾರಿಕೇಡ್ ಕೆಲಸ ನಡೆಯಲಿದೆ. ಸರಕಾರ ಎಷ್ಟು ಅನುದಾನ ನೀಡುತ್ತದೆಯೋ ಅಷ್ಟು ಕೆಲಸ ಮಾಡಬಹುದು. ನಾಗರಹೊಳೆ ಅರಣ್ಯದ ಸುತ್ತ ಪೂರ್ತಿ ಬ್ಯಾರಿಕೇಡ್ ಹಾಕಲು ಕೋಟ್ಯಾಂತರ ಹಣ ಬೇಕು. ಕಾಮಗಾರಿ ಪೂರ್ತಿಗೊಳ್ಳದ ಹೊರತು ಕಾಡನೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ನಾಡಿನಲ್ಲಿ ಬೀಡು ಬಿಟ್ಟಿರುವ ಕಾಡಾನೆ ಓಡಿಸಲು ಜನರಿಗೆ ರಕ್ಷಣೆ ನೀಡಲು ಅರಣ್ಯ ಸಿಬ್ಬಂದಿ ಕೊರತೆ ಇದ್ದರೂ ಅಗತ್ಯವಾದ ಕೆಲವು ತಾತ್ಕಾಲಿಕ ಸಿಬ್ಬಂದಿಗಳ ನೇಮಕದ ಮೂಲಕ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ನಾಗರಹೊಳೆ ಭಾಗದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಸುಸಜ್ಜಿತ ಕೊಟ್ಟಿಗೆ ನಿರ್ಮಾಣಕ್ಕೆ ರೂ. ೧೦ ಲಕ್ಷ ಅನುದಾನ ಇದ್ದು, ಇದರಲ್ಲಿ ಅಗತ್ಯ ರೈತರಿಗೆ ಅನುದಾನ ನೀಡಲಾಗುತ್ತದೆ. ಕಾಡಾನೆಗಳನ್ನು ಓಡಿಸಿ ಪ್ರಯೋಜನ ಇಲ್ಲ ಎನ್ನುವ ರೈತರ ಮಾತು ಸತ್ಯ. ಈಗಾಗಲೇ ಎರಡು ಆನೆ ಸೆರೆ ಹಿಡಿಯಲಾಗಿದ್ದು ಮಳೆ ನಿಂತ ನಂತರ ಇನ್ನು ಮೂರು ಆನೆಗಳನ್ನು ಹಿಡಿಯಲಾಗುವುದು. ನಾಡಿನಲ್ಲಿ ಗುಂಪಾಗಿರುವ ಕಾಡಾನೆಗಳಲ್ಲಿ ಹೆಣ್ಣಾನೆ ಬಿಟ್ಟು ಕೆಲವು ಸಲಗವನ್ನು ಪ್ರಾಯೋಗಿಕವಾಗಿ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ. ಹೆಣ್ಣಾನೆ ಸ್ಥಳಾಂತರ ಮಾಡಿದರೆ ಉಳಿದ ಆನೆ ಇನ್ನಷ್ಟು ಉಗ್ರವಾಗುತ್ತದೆ. ಕಾಫಿ ಗಿಡ ಒಂದಕ್ಕೆ ಕನಿಷ್ಟ ರೂ. ೬ ಸಾವಿರ ಪರಿಹಾರ ನೀಡುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ವೀರಾಜಪೇಟೆ ಅರಣ್ಯ ಕಚೇರಿಯಲ್ಲಿನ ಭ್ರಷ್ಟತೆ ಆರೋಪದ ಬಗ್ಗೆ ಆಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೊಡಗಿನಲ್ಲಿ ಮಾನವ ವನ್ಯಜೀವಿ ಸಂಘರ್ಷ ತಾರಕಕ್ಕೆ ಏರಿದೆ. ಕಾಡಾನೆಗಳ ಹಾವಳಿಜೊತೆಗೆ ಹುಲಿ ಕೂಡ ನಾಡಿಗೆ ದಾಂಗುಡಿ ಇಟ್ಟು ಜನ-ಜಾನುವಾರುಗಳನ್ನು ಕೊಲ್ಲುತ್ತಿದೆ. ಏನೇ ಸಭೆ ಮಾಡಿದರೂ, ಅರ್ಜಿ ನೀಡಿದರೂ, ಅಧಿಕಾರಿಗಳೂ ಬಂದು ಹೋದರೂ ರೈತರಿಗೆ ಯಾವ ಮುಕ್ತಿ ಇಲ್ಲ. ಹಲವಾರು ಕಡೆ ಜನ ಭಯದಿಂದ ದಿನ ಕಳೆಯುತ್ತಿದ್ದಾರೆ. ರೈಲ್ವೆ ಮರ ಕಡಿಯಲು ತಿಂಗಳುಗಟ್ಟಲೆ ಅಲೆಯಬೇಕು. ಇವರ ವರ್ಗಾವಣೆ ಮತ್ತು ಅಗತ್ಯ ಕ್ರಮ ಕೈಗೊಂಡು ರೈತರಿಗೆ ನೆಮ್ಮದಿ ಕೊಡಿ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ರೈತರಾದ ಬಿದ್ದಂಡ ಮಾದಯ್ಯ, ಮೈತಾಡಿಯ ಚಪ್ಪಂಡ ಹರೀಶ್, ತಿತಿಮತಿ ನೊಕ್ಯದ ಬೆಳ್ಯಪ್ಪ, ಸಿದ್ದಾಪುರದ ಬೋಪಣ್ಣ, ರೈತ ಸಂಘದ ಕಾರ್ಯದರ್ಶಿ ಮತ್ತು ಶ್ರೀಮಂಗಲದ ಚಂಗಪ್ಪ, ಕಾನೂನು ಸಲಹೆಗಾರ ಹೇಮ ಚಂದ್ರ, ಲಕ್ಷö್ಮಣ ಸೋಮವಾರಪೇಟೆ ಕಡೆಯ ರೈತರು ತಮಗೆ ಕಾಡಾನೆ ಗಳಿಂದ ಆಗಿರುವ ನಷ್ಟ ತೊಂದರೆ, ಹುಲಿ ದಾಳಿಯಿಂದ ಜೀವಭಯದ ಭೀತಿ ಸೂಕ್ತ ಪರಿಹಾರ ಇಲ್ಲದಿರುವ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು. ಸಭೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಸುಜಯ್ ಬೋಪಯ್ಯ, ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ, (ಪ್ರಭಾರ) ಶಿವರಾಮ್, ಪೂವಯ್ಯ ಹಾಗೂ ಹಲವು ವಿಭಾಗದಿಂದ ಆಗಮಿಸಿದ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.