ಕರಿಕೆ, ಜು. ೨೧: ಕಳೆದ ರಾತ್ರಿ ಭಾಗಮಂಡಲ-ಕರಿಕೆ ಅಂತರ್ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು. ತಲಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯ ಬಾಚಿಮಲೆ ಎಂಬಲ್ಲಿ ಮರ ಉರುಳಿ ಬಿದ್ದು ವಾಹನ ಸಂಚಾರ ಬಂದ್ ಆಗಿತ್ತು. ಈ ಬಗ್ಗೆ ‘ಶಕ್ತಿ' ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಕೊಟ್ರೇಶ್ ಅವರ ಗಮನಕ್ಕೆ ತಂದ ಕೂಡಲೇ ತಮ್ಮ ಸಿಬ್ಬಂದಿಗಳನ್ನು ಮರ ಕತ್ತರಿಸುವ ಯಂತ್ರದೊAದಿಗೆ ಸ್ಥಳಕ್ಕೆ ಕಳುಹಿಸಿ ಮರವನ್ನು ತೆರವುಗೊಳಿಸಿ ಸಾಲುಗಟ್ಟಿ ನಿಂತ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಕಳೆದ ಹತ್ತು ವರ್ಷಗಳ ನಂತರ ಈ ರಸ್ತೆಗೆ ನಿರಂತರವಾಗಿ ಮರಗಳು ಹಾಗೂ ಬರೆ ಉರುಳಿ ಬೀಳುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ದಿನನಿತ್ಯ ಅಡಚಣೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ಒಂದು ಜೆಸಿಬಿ ಯಂತ್ರವನ್ನು ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.