ಶನಿವಾರಸಂತೆ, ಜು. ೨೦: ನೇಪಾಳದ ಪೊಕವೊರಾ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆದ ಅಂರ‍್ರಾಷ್ಟಿçÃಯ ಹ್ಯಾಂಡ್ ಬಾಲ್ ಅಂತಿಮ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ತಂಡದ ಕ್ಯಾಪ್ಟನ್ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದ ಟಿ.ಎ. ಜೀವನ್ ಬೆಳ್ಳಿ ಪದಕ ಗಳಿಸಿ ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಗ್ರಾಮೀಣ ಪ್ರತಿಭೆ ಟಿ.ಎ. ಜೀವನ್ ಗೋಪಾಲಪುರ ಗ್ರಾಮದ ಟಿ.ಕೆ. ಅಶೋಕ್-ಹೇಮಾ ದಂಪತಿಯ ಪುತ್ರ. ಪ್ರಸ್ತುತ ಆದಿಚುಂಚನಗಿರಿ ಮಠದ ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು. ವಿದ್ಯಾರ್ಥಿಯಾಗಿದ್ದು, ಹ್ಯಾಂಡ್ ಬಾಲ್ ಕ್ರೀಡಾಪಟು. ಕೊಡ್ಲಿಪೇಟೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ೧೦ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು ಹಾಕಿ, ಫುಟ್ಬಾಲ್ ಕ್ರೀಡಾಪಟುವಾಗಿದ್ದರು. ಬಿಜಿಎಸ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಗೆ ಸೇರ್ಪಡೆಯಾದಾಗ ರಾಷ್ಟçಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಸಲುವಾಗಿ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿಕೊಂಡು ಕೋಚ್ ವೆಂಕಟೇಶ್ ಅವರಿಂದ ತರಬೇತಿ ಪಡೆದಿದ್ದರು. ವರ್ಷದಲ್ಲೇ ಅಂರ‍್ರಾಷ್ಟಿçÃಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗಳಿಸಿರುವುದು ಹೆಮ್ಮೆಯಾಗಿದೆ.